ನೇಣುಬಿಗಿದ ಸ್ಥಿತಿಯಲ್ಲಿ ರಿಕ್ಷಾ ಚಾಲಕ ಪತ್ತೆ

ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲು
crime
crime
Published on: 

ಕಾಸರಗೋಡು: ಕುಂಬಳೆ ಇಚ್ಲಂಗೋಡು ಅಡ್ಕ ನಿವಾಸಿ, ಆಟೋ ಚಾಲಕ ನಾಗೇಶ ಪೂಜಾರಿ ಎ.(37) ಎಂಬುವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಂದ್ಯೋಡಿನಲ್ಲಿ ಆಟೋ ಚಾಲಕರಾಗಿದ್ದರು. ಮನೆಯ ಕೆಳ ಅಂತಸ್ತಿನ ಹಾಲ್‌ನಲ್ಲಿ ಫ್ಯಾನ್‌ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯೇ ಕೃತ್ಯಕ್ಕೆ ಕಾರಣವೆಂದು ಸಂಶಯಿಸಲಾಗಿದೆ. ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ನಗ-ನಗದು ಕಳವು

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪನಯಾಲ್ ಪೆರಿಯಡ್ಕ ನೀರಾಟಿ ನಿವಾಸಿ ಧನ್ಯಾ ಎಂಬುವರ ಮನೆಗೆ ನುಗ್ಗಿದ ಕಳ್ಳರು 5 ಪವನ್ ಚಿನ್ನ, 3ಸಾವಿರ ರೂ. ನಗದು ಕಳವುಗೈದಿದ್ದಾರೆ. ವಿದ್ಯುತ್ ಮೀಟರ್‌ನ ಬಾಕ್ಸ್‌ನಲ್ಲಿಟ್ಟಿದ್ದ ಕೀಲಿಕೈ ತೆಗೆದು ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 5 ಪವನ್ ಚಿನ್ನಾಭರಣ, 3 ಸಾವಿರ ರೂ. ದೋಚಿದ್ದಾರೆ. ಧನ್ಯಾ ಅವರು ಎಂದಿನಂತೆ ಬೆಳಗಿನ ಜಾವ ವಾಯು ವಿಹಾರಕ್ಕಾಗಿ ತೆರಳಿದ್ದು, ವಾಪಸ್ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಬೇಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.