ಮಂಗಳೂರು ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮಂಗಳೂರು: ನಗರದ ಪಾಂಡೇಶ್ವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯವಿದ್ದ ಯುವಕನೊಬ್ಬ ತಡರಾತ್ರಿ ಲ್‌ಟಿನಲ್ಲಿ ತೆರಳುತ್ತಿದ್ದಾಗ ಲ್‌ಟಿ ಕೆಟ್ಟು ನಿಂತು ಬಾಕಿಯಾದ ವಿದ್ಯಮಾನ ನಡೆದಿದೆ. ಸಕಾಲಕ್ಕೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಿದ್ದಾರೆ.
ಮೂಲತಃ ಅಸ್ಸಾಂ ನಿವಾಸಿ, ಪ್ರಸ್ತುತ ಪಾಂಡೇಶ್ವರದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಕೇಶವ್ (33) ರಕ್ಷಣೆಗೊಳಗಾದ ಯುವಕ.
ಪ್ರಕರಣ ವಿವರ: ಕೇಶವ್ ಪಾಂಡೇಶ್ವರದ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮುಗಿಸಿ ರಾತ್ರಿ 2ಗಂಟೆಗೆ ತಾನು ವಾಸ್ತವ್ಯವಿದ್ದ ಮಿಜಾರ್ ಅಪಾರ್ಟ್‌ಮೆಂಟ್‌ಗೆ ಮರಳಿ ಬಂದಿದ್ದಾನೆ. ಈ ವೇಳೆ 2ನೇ ಮಹಡಿಯಲ್ಲಿರುವ ತನ್ನ ್ಲ್ಯಾಟ್‌ಗೆ ಲ್‌ಟಿನಲ್ಲಿ ತೆರಳುತ್ತಿದ್ದು, ತಾಂತ್ರಿಕ ದೋಷದಿಂದ ಲ್‌ಟಿ ಏಕಾಏಕಿ ಸ್ಥಗಿತಗೊಂಡಿದೆ. ಇದರಿಂದ ಯುವಕ ಆಪತ್ತಿಗೆ ಸಿಲುಕಿದ್ದ, ಅಪಾರ್ಟ್‌ಮೆಂಟ್ ಸೆಕ್ಯುರಿಟಿಗೆ ವಿಷಯ ಗೊತ್ತಾಗಿದೆ.
ಅಗ್ನಿಶಾಮಕ ಠಾಣೆಗೆ ಕರೆ: ಸೆಕ್ಯುರಿಟಿ ಕೂಡಲೇ ಪಾಂಡೇಶ್ವರ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ್ದ ಅಕಾರಿ, ಸಿಬ್ಬಂದಿ ಹೈಡ್ರಾಲಿಕ್ ಸೈಡರ್ ಉಪಕರಣವನ್ನು ಬಳಸಿ ಲ್‌ಟಿನ ಬಾಗಿಲನ್ನು ತೆರೆದು, ಒಳಗೆ ಸಿಲುಕಿದ್ದ ಯುವಕನನ್ನು ರಕ್ಷಿಸಿದ್ದಾರೆ. ಈ ಲ್‌ಟಿ ತೀರಾ ಹಳೆಯದಾಗಿದ್ದು, ಕೀ ಮೂಲಕ ತೆರೆಯಲು ಸಾಧ್ಯವಾಗಲಿಲ್ಲ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಕಾರಿ ಹರೀಶ್ಚಂದ್ರ, ಲೀಡಿಂಗ್ ೈರ್‌ಮ್ಯಾನ್ ಚಂದ್ರ, ಚಾಲಕ ಕಿರಣ್ ಹಾಗೂ ಸಿಬ್ಬಂದಿ ರಮೇಶ್ ಮತ್ತು ಲಾಲ್ ಅಹಮದ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net