ಮಾರ್ಗದರ್ಶಕ ಕೇಂದ್ರವಾಗಿ ನಿಟ್ಟೆ ವಿವಿ ಮರುನಿಯೋಜನೆ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಸಹಯೋಗದೊಂದಿಗೆ ನಿಟ್ಟೆ ವಿಶ್ವವಿದ್ಯಾಲಯ ನಡೆಸಿದ ಅತ್ಯುತ್ತಮ ಕಾರ್ಯಕ್ರಮಗಳ ಆಧಾರದ ಮೇಲೆ ನಿಟ್ಟೆಯನ್ನು ಐದು ವರ್ಷಗಳ ಅವಧಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟ ನಾಲ್ಕು (ಎಫ್‌ಎಒ)ಮಾರ್ಗದರ್ಶಕ ಕೇಂದ್ರಗಳಲ್ಲಿ ಒಂದಾಗಿ ನೇಮಿಸಲಾಗಿತ್ತು.
ಎಫ್‌ಎಒ ಉಪಮಹಾನಿರ್ದೇಶಕ ಗಾಡ್ಫ್ರೇ ಮ್ಯಾಗ್ವೆಂಜಿ ಅವರಿಂದ ಸಹಾಯಕ ಮಹಾನಿರ್ದೇಶಕ ಡಾ.ಥಾನವತ್ ಟಿಯೆನ್ಸಿನ್ ಮತ್ತು ಡಾ.ಮ್ಯಾನುಯೆಲ್ ಬರಾಂಗೆ ಸಮ್ಮುಖದಲ್ಲಿ ಡಾ.ಎಂ.ಎಸ್.ಮೂಡಿತ್ತಾಯ  ಮರು ನಾಮನಿರ್ದೇಶನ ಪ್ರಮಾಣಪತ್ರ ಪಡೆದರು.
ಎಫ್‌ಎಒ ಉಪಮಹಾನಿರ್ದೇಶಕ ಗಾಡ್ಫ್ರೇ ಮ್ಯಾಗ್ವೆಂಜಿ ಅವರಿಂದ ಸಹಾಯಕ ಮಹಾನಿರ್ದೇಶಕ ಡಾ.ಥಾನವತ್ ಟಿಯೆನ್ಸಿನ್ ಮತ್ತು ಡಾ.ಮ್ಯಾನುಯೆಲ್ ಬರಾಂಗೆ ಸಮ್ಮುಖದಲ್ಲಿ ಡಾ.ಎಂ.ಎಸ್.ಮೂಡಿತ್ತಾಯ ಮರು ನಾಮನಿರ್ದೇಶನ ಪ್ರಮಾಣಪತ್ರ ಪಡೆದರು.
Published on: 

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಸಹಯೋಗದೊಂದಿಗೆ ನಿಟ್ಟೆ ವಿಶ್ವವಿದ್ಯಾಲಯ ನಡೆಸಿದ ಅತ್ಯುತ್ತಮ ಕಾರ್ಯಕ್ರಮಗಳ ಆಧಾರದ ಮೇಲೆ ನಿಟ್ಟೆಯನ್ನು ಐದು ವರ್ಷಗಳ ಅವಧಿಗೆ ಜಾಗತಿಕವಾಗಿ ಗುರುತಿಸಲ್ಪಟ್ಟ ನಾಲ್ಕು (ಎಫ್‌ಎಒ)ಮಾರ್ಗದರ್ಶಕ ಕೇಂದ್ರಗಳಲ್ಲಿ ಒಂದಾಗಿ ನೇಮಿಸಲಾಗಿತ್ತು.

ಮಾರ್ಗದರ್ಶಕ ಕೇಂದ್ರವಾಗಿ ನಿಟ್ಟೆಯ ಕಾರ್ಯಕ್ಷಮತೆಯನ್ನು (ಎಫ್‌ಎಒ) ಮೌಲ್ಯಮಾಪನ ಮಾಡಿ ಈಗ ಮತ್ತೆ ನಿಟ್ಟೆಯನ್ನು 2026ರಿಂದ 2031ರವರೆಗೆ 5 ವರ್ಷಗಳ ಅವಧಿಗೆ (ಎಫ್‌ಎಒ)ಮಾರ್ಗದರ್ಶಕ ಕೇಂದ್ರವಾಗಿ ಮರು ನಾಮನಿರ್ದೇಶನ ಮಾಡಲಾಯಿತು.

ಸೆ.21ರಿಂದ 23ರವರೆಗೆ ಒಂದು ಆರೋಗ್ಯಕ್ಕಾಗಿ ಕ್ರಮಗಳ ಕುರಿತು (ಎಫ್‌ಎಒ) ಜಾಗತಿಕ ಸಮ್ಮೇಳನದ ಸಂದರ್ಭದಲ್ಲಿ ರೋಮ್‌ನ (ಎಫ್‌ಎಒ) ಪ್ರಧಾನ ಕಚೇರಿಯಲ್ಲಿ ಈ ಪುನರ್‌ನಾಮನಿರ್ದೇಶನ ಸಮಾರಂಭ ನಡೆಯಿತು. ಈ ಜಾಗತಿಕ ಸಮ್ಮೇಳನದಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ನಿಟ್ಟೆ (ಎಫ್‌ಎಒ) ಮಾರ್ಗದರ್ಶಕ ಕೇಂದ್ರದ ಮುಖ್ಯಸ್ಥೆ ಡಾ.ಇಂದ್ರಾಣಿ ಕರುಣಾಸಾಗರ್, ಸಲಹೆಗಾರ ಡಾ.ಇಡ್ಯಾ ಕರುಣಾಸಾಗರ್ ಭಾಗವಹಿಸಿದ್ದರು.

ಎಫ್‌ಎಒ ಉಪಮಹಾನಿರ್ದೇಶಕ ಗಾಡ್ಫ್ರೇ ಮ್ಯಾಗ್ವೆಂಜಿ ಅವರಿಂದ ಸಹಾಯಕ ಮಹಾನಿರ್ದೇಶಕ ಡಾ.ಥಾನವತ್ ಟಿಯೆನ್ಸಿನ್ ಮತ್ತು ಡಾ.ಮ್ಯಾನುಯೆಲ್ ಬರಾಂಗೆ ಸಮ್ಮುಖದಲ್ಲಿ ಡಾ.ಎಂ.ಎಸ್.ಮೂಡಿತ್ತಾಯ ಮರು ನಾಮನಿರ್ದೇಶನ ಪ್ರಮಾಣಪತ್ರ ಪಡೆದರು. 24 ಮತ್ತು 25ರಂದು ರೋಮ್‌ನ ಇನ್‌ಸ್ಟಿಟ್ಯೂಟೊ ಝೂಪ್ರೊಫಿಲಾಟಿಕೊ ಸ್ಪೆರಿಮೆಂಟಲ್ ಡೆಲ್ ಲಾಜಿಯೊ ಡೆಲ್ಲೆ ಟೊಸ್ಕಾನಾ ಅಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದಲ್ಲಿ ಚೀನಾ, ಯುಎಸ್‌ಎ, ಇಟಲಿ ಮತ್ತು ಭಾರತದ ಎಲ್ಲ ಮಾರ್ಗದರ್ಶಕ ಕೇಂದ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ.ಇಡ್ಯಾ ಕರುಣಾಸಾಗರ್ ಮತ್ತು ಡಾ.ಇಂದ್ರಾಣಿ ಕರುಣಾಸಾಗರ್ ಭಾರತದ ಅನುಭವದ ಪ್ರಸ್ತುತಿ ಮತ್ತು ಮುಂದಿನ ಕಾರ್ಯ ಯೋಜನೆ ಅಭಿವೃದ್ಧಿಪಡಿಸುವ ಕಾರ್ಯಪಡೆಯ ನೇತೃತ್ವ ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net