

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾಜೆ ತಲೆಬೈಲು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು, ಮೂರು ಮಂಧಿಯನ್ನು ಬಂಧಿಸಿದ್ದಾರೆ. ಬದಿಯಡ್ಕ ಸನಿಹದ ವಾಡತ್ತಡ್ಕ ನಿವಾಸಿ ಪ್ರಮೋದ್ (43), ವಿದ್ಯಾಗಿರಿ ಕಡಾರಿನ ಜಗದೀಶ ಶೆಟ್ಟಿ (58), ನಾರಂಪಾಡಿ ನೆಲ್ಲಿಯಡ್ಕದ ಸುಕೇಶ್ (28) ಬಂಧಿತರು.
ಸ್ಥಳದಿಂದ 6 ಅಂಕದ ಕೋಳಿಗಳು ಮತ್ತು ಜೂಜಿಗೆ ಬಳಸಿದ್ದರೆನ್ನಲಾದ 3,250 ರೂ. ನಗದು ವಶಪಡಿಸಿಕೊಂಡಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಬದಿಯಡ್ಕ ಠಾಣೆ ಪ್ರಿನ್ಸಿಪಾಲ್ ಎಸ್‌ಐ ಸುನಿಲ್ ಕುವಾರ್ ನೇತತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಬಂಧಿತರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.