ಕುಕ್ಕೆ ದೇವಳದಲ್ಲಿ ಕ್ಯೂಆರ್ ಕೋಡ್ ರಸೀದಿ ಸೌಲಭ್ಯ

ದೇವಳದ ಎರಡು ಕಡೆಗಳಲ್ಲಿ ಸೌಲಭ್ಯ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ
Published on: 

ಸುಬ್ರಹ್ಮಣ್ಯ: ಭಕ್ತರ ಅನುಕೂಲಕ್ಕಾಗಿ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ಸೇವಾ ರಸೀದಿ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗಿದೆ. ದೇವಳದ ಎರಡು ಕಡೆಗಳಲ್ಲಿ ಈ ಸೌಲಭ್ಯ ಅಳವಡಿಸಲಾಗಿದೆ. ಭಕ್ತರು ವಿವಿಧ ಸೇವೆಗಳ ಶುಲ್ಕವನ್ನು ಮೊಬೈಲ್ ಮೂಲಕ ಸುಲಭವಾಗಿ ಪಾವತಿಸಿ ಸಂಬಂಧಿಸಿದ ಸೇವೆಗಳ ರಸೀದಿ ಪಡೆಯಬಹುದು. ಸರತಿ ಸಾಲಿನಲ್ಲಿ ಕಾಯದೆ ನೇರವಾಗಿ ಸೇವಾ ರಸೀದಿ ಪಡೆಯಬಹುದು ಎಂದು ದೇವಳದ ಆಡಳಿತ ತಿಳಿಸಿದೆ.

ಕಾಯಂ ಸೇವೆ, ಅನ್ನದಾನಕ್ಕೆ ಪ್ರತ್ಯೇಕ ಕೌಂಟರ್

ದೇವಸ್ಥಾನದಲ್ಲಿ ಕಾಯಂ ಸೇವೆ ಹಾಗೂ ಅನ್ನದಾನದ ರಶೀದಿ ಪಡೆಯಲು ಈ ಹಿಂದೆ ಸೀಮಿತ ಸ್ಥಳಾವಕಾಶದ ಕೌಂಟರ್‌ಗಳಿದ್ದ ಕಾರಣ ಭಕ್ತರು ಸಾಲುದ್ದದ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಇದೀಗ ದೇವಳದ ಗೋಪುರದ ಬಲಭಾಗದಲ್ಲಿ ಕಾಯಂ ಸೇವೆ ಹಾಗೂ ಅನ್ನದಾನದ ರಸೀದಿಗಾಗಿ ಪ್ರತ್ಯೇಕ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ದಸರಾ ರಜೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಅಗತ್ಯ ವ್ಯವಸ್ಥೆಗಳನ್ನು ಮುಂದುವರಿಸಲಾಗುವುದು ಎಂದು ದೇವಳದ ಆಡಳಿತ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net