ಪುತ್ತೂರು: ಮಂಗಳೂರು ಸಚಿವ ಸಂಪುಟದಲ್ಲಿ ಪುತ್ತೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಪಿಎಂಸಿಆರ್‌ಐ) ನಿರ್ಮಾಣಕ್ಕೆ ಅಗತ್ಯ ಅನುದಾನಕ್ಕೆ ಅನುಮೋದನೆ ಸಿಕ್ಕಿದ ಬೆನ್ನಲ್ಲೇ ‘ಪ್ಲ್ಯಾನ್ ಬಿ’ಯಂತೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಽಕಾರಿ ವರ್ಗ ಮುಂದಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನದಂಡಗಳನ್ನು ಪೂರೈಸಿ ೨೦೨೭ರಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಬೇಕಾದ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸೋಮವಾರ ತಜ್ಞರ ತಂಡದಿಂದ ಕಟ್ಟಡಗಳ ಪರಿಶೀಲನೆ ನಡೆಯಿತು.
ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸೇಡಿಯಾಪುವಿನಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ ಒಂದು ವರ್ಷ ಬೇಕಾಗಿರುವ ಕಾರಣ ತಾತ್ಕಾಲಿಕ ನೆಲೆಯಲ್ಲಿ ಪ್ಲ್ಯಾನ್ ಬಿ ಅನುಷ್ಠಾನಿಸಲು ವೈದ್ಯಕೀಯ ಕಾಲೇಜಿನ ಅಽಕಾರಿಗಳು ಹಾಗೂ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಪಾರ್ಥಮಿಕ ಅಗತ್ಯಗಳನ್ನು ತ್ವರಿತವಾಗಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ಪುತ್ತೂರು ಹಳೇ ನ್ಯಾಯಾಲಯ ಕಟ್ಟಡದಲ್ಲಿ ಕಾಲೇಜು ಪ್ರಾರಂಭಿಸುವ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಈ ಹಿಂದೆಯೇ ಪ್ಲ್ಯಾನ್ ಬಿ ಸಿದ್ಧಪಡಿಸಿದ್ದರು. ಇದಕ್ಕೆ ಪೂರಕವಾಗಿ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಟ್ಟಂಪಾಡಿಯ ಯುವತಿಯರ ಹಾಸ್ಟೆಲ್, ಆಸ್ಪತ್ರೆ ಪಕ್ಕದ ಹಳೆಯ ಮಹಿಳಾ ಕಾಲೇಜು ಕಟ್ಟಡವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳುವ ಬಗ್ಗೆ ತಂಡ ಸ್ಥಳ ಪರಿಶೀಲನೆ ನಡೆಸಿದೆ.
ಪುತ್ತೂರು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪಿಎಂ ಸಿಆರ್‌ಐ ವಿಶೇಷ ಅಧಿಕಾರಿ ಡಾ.ಲೋಹಿತ್ ಕುಮಾರ್, ವಿವಿಧ ವಿಭಾಗ ಮುಖ್ಯಸ್ಥರಾದ ಡಾ.ಗಂಗಾಧರ್, ಡಾ.ಅವಿನಾಶ್ ಎಸ್.ಎಸ್., ಡಾ.ಶಶಾಂಕ್ ಕೆ.ಜೆ. ತಂಡದಲ್ಲಿದ್ದರು.
ವೈದ್ಯಕೀಯ ಕಾಲೇಜಿನಲ್ಲಿ ಪ್ರಮುಖವಾದ ಅಂಗ ರಚನಾಶಾಸ್ತ್ರ, ಶರೀರ ಕ್ರಿಯಾಶಾಸ್ತ್ರ, ಔಷಧಿಯ ಶಾಸ್ತ್ರ, ರೋಗಶಾಸ್ತ್ರ ವಿಭಾಗಕ್ಕೆ ಬೇಕಾದ ವ್ಯವಸ್ಥೆಯನ್ನು ಹಳೆಯ ನ್ಯಾಯಾಲಯ ಕಟ್ಟಡದಲ್ಲಿ ಮಾಡಿಕೊಳ್ಳಲಾಗುತ್ತಿದೆ. ಆಸ್ಪತ್ರೆ ಹಾಗೂ ಕಾಲೇಜಿನ ೧೯ ವಿಭಾಗಗಳಿಗೆ ೯೭ ವೈದ್ಯಾಽಕಾರಿಗಳು, ೩೭೨ ನರ್ಸಿಂಗ್, ೧೮೨ ಪ್ಯಾರಾಮೆಡಿಕಲ್, ೧೦೦ ಗ್ರೂಪ್ ಡಿ, ೫೦ ಭದ್ರತಾ ಸಿಬ್ಬಂದಿಯ ತ್ವತರಿತ ನೇಮಕಾತಿ ನಡೆಯಲಿದೆ.
ಕೋರ್ಸ್ ಪ್ರಾರಂಭಿಸಲು ವಿಶ್ವವಿದ್ಯಾಲಯಕ್ಕೆ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದರೆ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಪರಿಶೀಲನೆಗೆ ತಂಡ ಪುತ್ತೂರಿಗೆ ಆಗಮಿಸುತ್ತದೆ. ಅವರು ಪರಿಶೀಲನೆ ನಡೆಸಿ, ಮೂಲಭೂತ ಸೌಕರ್ಯ ಇದ್ದರೆ ತಕ್ಷಣ ಒಪ್ಪಿಗೆ ನೀಡುತ್ತಾರೆ. ಇಲ್ಲವಾದರೆ ನ್ಯೂನತೆ ಸರಿಪಡಿಸಿಕೊಳ್ಳಲು ಒಂದು ತಿಂಗಳು ಕಾಲಾವಕಾಶ ನೀಡುತ್ತಾರೆ. ಇದನ್ನು ಸರಿಪಡಿಸಿಕೊಟ್ಟರೆ ಮತ್ತೆ ಪರಿಶೀಲನೆ ಮಾಡಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಅನುಮೋದನೆ ನೀಡುತ್ತಾರೆ. ಆ ಬಳಿಕ ಜೂನ್- ಜುಲೈನ್ ನೀಟ್ ಕೌನ್ಸಿಲ್‌ನಲ್ಲಿ ಪುತ್ತೂರು ವೈದ್ಯಕೀಯ ಕಾಲೇಜಿನ ಸೀಟುಗಳು ಸೇರ್ಪಡೆಯಾಗುತ್ತವೆ.
* ಆಸ್ಪತ್ರೆಯಲ್ಲಿ ೨೨೦ ಹಾಸಿಗೆ ವ್ಯವಸ್ಥೆ
* ಸಿಟಿ ಸ್ಕ್ಯಾನ್, ಪೂರ್ಣಪ್ರಮಾಣದ ಬ್ಲಡ್ ಬ್ಯಾಂಕ್
* ವೈದ್ಯರು ಸೇರಿ ಅಗತ್ಯ ಸಿಬ್ಬಂದಿ ನೇಮಕ
* ಬಾಲಕ, ಬಾಲಕಿಯರ ಹಾಸ್ಟೆಲ್
* ಅಗತ್ಯ ಆರೋಗ್ಯ ಕೇಂದ್ರಗಳು
* ೫೦ ವಿದ್ಯಾರ್ಥಿಗಳಿಗೆ ಕಾಲೇಜು ವ್ಯವಸ್ಥೆ