ಹಿಂದೂ ಸಮಾಜಕ್ಕೆ ಆಂಜನೇಯ ಆದರ್ಶ ವ್ಯಕ್ತಿತ್ವ PUTTUR

ಎಡನೀರು ಶ್ರೀ ಆಶೀರ್ವಚನ | ನೆಲಪ್ಪಾಲು ಕ್ಷೇತ್ರದಲ್ಲಿ ಧರ್ಮಸಭೆ
Published on: 

ಪುತ್ತೂರು: ಹಿಂದೂ ಆರಾಧನಾ ಕೇಂದ್ರಗಳು ಸಮಾಜದ ಎಲ್ಲ ಸ್ತರದ ಜನರ ಶ್ರದ್ಧೆ, ಬದ್ಧತೆಯಿಂದ ನಿರ್ಮಾಣವಾಗುತ್ತದೆ. ಕಾರ್ಯಕರ್ತರ ಶ್ರಮದಲ್ಲಿ ದೇವಸ್ಥಾನದ ನಿರ್ಮಾಣವಾಗಿರುವುದು ನೆಲಪ್ಪಾಲಿನ ವಿಶೇಷವಾಗಿದೆ. ಆಂಜನೇಯ ಹಿಂದೂ ಸಮಾಜಕ್ಕೆ ಆದರ್ಶದ ವ್ಯಕ್ತಿತ್ವವಾಗಿದ್ದು, ಈ ಮೂಲಕ ಧರ್ಮದ ಬಗ್ಗೆ ಜಾಗೃತಿ ಮೂಡಲು ಸಾಧ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಶ್ರೀಗುರುಕೃಷ್ಣ ಚಾರಿಟೆಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಪಂಚಮುಖಿ ಆಂಜನೇಯ ಯಾಗದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ವಕೀಲ ಡಾ.ಅರುಣ್ ಶ್ಯಾಮ್, ಯಾಗ ಸಮಿತಿ ಸಂಚಾಲಕ ಜೀವಂದರ ಜೈನ್, ಪ್ರಧಾನ ಕಾರ್ಯದರ್ಶಿ ಮುರಳೀಕೃಷ್ಣ ಹಸಂತಡ್ಕ ಮತ್ತಿತರರು ಉಪಸ್ಥಿತರಿದ್ದರು. ಪುನೀತ್ ಅತ್ತಾವರ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ್ ತೆಂಕಿಲ ವಂದಿಸಿದರು.

ಹನುಂತನ ಆರಾಧನೆ ಹಾಗೂ ಸಹಾಯ ಸಿಕ್ಕಾಗ ರಾಮನ ದರ್ಶವಾಗುತ್ತದೆ. ಆಕ್ರಮಣವನ್ನು ನೋಡಿ ಸುಮ್ಮನಾಗುವವರು ಹನುಮ ಭಕ್ತರಾಗಲು ಸಾಧ್ಯವಿಲ್ಲ. ಪರಾಕ್ರಮ ಮೆರೆದಾಗ ಹನುಮಂತನ ಆರಾಧನೆಗೆ ಅರ್ಥ ಬರುತ್ತದೆ. ಶ್ರದ್ಧಾ ಕೇಂದ್ರದಲ್ಲಿ ಯುವಕರಿಗೆ ವ್ಯಾಯಾಮ ಶಾಲೆಯನ್ನು ತೆರೆಯಬೇಕು.
ಗೋಪಾಲ್ ಜೀ, ಅಯೋಧ್ಯೆ ರಾಮ ಮಂದಿರ ನಿರ್ಮಾಣ ಉಸ್ತುವಾರಿ