ಪುತ್ತೂರು: ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ೨೦೨೭ರ ಶೈಕ್ಷಣಿಕ ವರ್ಷದಲ್ಲಿ ೫೦ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಪ್ಲ್ಯಾನ್ ಬಿ ವೇಗ ಪಡೆದುಕೊಂಡಿದ್ದು, ಬೆಂಗಳೂರು ರಾಜೀವ್ ಗಾಂಽ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯ ಆದೇಶದಂತೆ ತಪಾಸಣಾ ಸಮಿತಿಯ ಮೂರು ಮಂದಿ ತಜ್ಞರ ತಂಡ ಶನಿವಾರ ಪುತ್ತೂರಿಗೆ ಆಗಮಿಸಿ ಕಾಮಗಾರಿ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿತು.
ತಂಡದ ಅಧ್ಯಕ್ಷ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ.ಸುರೇಶ್ ಎಸ್.ಕನಕಣ್ಣವರ್, ಸದಸ್ಯರಾದ ಶಿವಮೊಗ್ಗ ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ.ಮಿಥುನ್ ಕೆ.ಎಂ., ಶಿವಮೊಗ್ಗ ಎಸ್ಐಎಂಎಸ್ನ ಡಾ.ರಮೇಶ್ ಬಾಬು ಅವರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದರು. ತಪಾಸಣೆಯ ಸಂಪೂರ್ಣ ವರದಿಯನ್ನು ೨೪ ಗಂಟೆಗಳ ಒಳಗೆ ಕುಲಸಚಿವರಿಗೆ ಸಲ್ಲಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯ ಆದೇಶದಲ್ಲಿ ಸೂಚಿಸಲಾಗಿದೆ.
ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಲೋಹಿತ್ ಕುಮಾರ್, ಡಾ.ಶಶಾಂಕ್, ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್, ಶಾಸಕರ ಆಪ್ತ ಕಾರ್ಯದರ್ಶಿ ಪ್ರದೀಪ್, ರಂಜಿತ್ ಮತ್ತಿತರರು ಹಾಜರಿದ್ದರು.
ವಿವಿಧ ವಿಭಾಗಗಳಿಗೆ ಕೊಠಡಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಬೇಕಾದ ೬ ಮೃತದೇಹಗಳನ್ನು ಶಿವಮೊಗ್ಗ, ಹಾಸನ, ಮಡಿಕೇರಿ ಮೆಡಿಕಲ್ ಕಾಲೇಜಿನಿಂದ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಯಂತ್ರೋಪಕರಣ, ಪರಿಕರಗಳು ಪುತ್ತೂರಿಗೆ ಆಗಮಿಸುತ್ತಿದ್ದು, ಇವುಗಳನ್ನು ಜೋಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಮಾನವ ದೇಹದ ವಿವಿಧ ಅಂಗಾಂಗಳು ಪುತ್ತೂರಿಗೆ ಆಗಮಿಸಿದ್ದು, ಅವುಗಳನ್ನು ಸಂರಕ್ಷಿಸಿಡಲಾಗಿದೆ. ವಿದ್ಯಾರ್ಥಿಗಳಿಗೆ ಬೇಕಾದ ಆಸನದ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
///ಕೋಟ್ಸ್//
/////
/////
ಚಿತ್ರ ಇದೆ:
ಪಿಟಿಆರ್*೨೧ ನವ್*೧ :
ಪಿಟಿಆರ್*೨೧ ನವ್*೨ :
ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ವಿವಿಧ ಅಂಗಾಂಗಳನ್ನು ಸಂರಕ್ಷಿಸಿಟ್ಟಿರುವುದು.
ಪಿಟಿಆರ್*೨೧ ನವ್*೩ :
ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ವಿವಿಧ ವೈದ್ಯಕೀಯ ಪರಿಕರಗಳನ್ನು ತಂದಿರುವುದು.