ಪುತ್ತೂರು: ಎರಡು ಹೆದ್ದಾರಿಗಳು ಸಾಗುವ ದಾರಿಯುದ್ದಕ್ಕೂ ಸುಸಜ್ಜಿತ ಆಸ್ಪತ್ರೆಗಳಿಲ್ಲದ ಕಾರಣ ಪುತ್ತೂರು ಭಾಗದಲ್ಲಿ ಅತ್ಯಾಧುನಿಕ ಸವಲತ್ತುಗಳನ್ನೊಳಗೊಂಡ ಆಸ್ಪತ್ರೆಯಾಗಬೇಕೆಂಬ ಕೂಗು ಸಾಕಾರಗೊಳ್ಳುತ್ತಿದೆ. ದಶಕಗಳ ಕನಸಾದ ಮೆಡಿಕಲ್ ಆಸ್ಪತ್ರೆ ಸಹಿತವಾದ ಕಾಲೇಜು ಸ್ಥಾಪನೆ ಕಾರ್ಯ ಭರದಿಂದ ಸಾಗುತ್ತಿರುವ ಬೆನ್ನಿಗೆ ಪುತ್ತೂರು ಭಾಗಕ್ಕೆ ಇನ್ನಷ್ಟು ಸವಲತ್ತು ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಈ ಮೂಲಕ ಭವಿಷ್ಯದಲ್ಲಿ ಪುತ್ತೂರು ಎಲ್ಲ ರೀತಿಯ ಆರೋಗ್ಯ ವ್ಯವಸ್ಥೆ ಹೊಂದಿದ ಕೇಂದ್ರವಾಗಿ ಹೊರಬೇಕೆಂಬ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿದೆ. ಮುಖ್ಯವಾಗಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆಯೊಂದು ಬೇಕೆಂಬ ಕನಸು ಚಿಗರೊಡೆದಿದೆ.
ಕ್ಯಾನ್ಸರ್, ಹೃದ್ರೋಗ, ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ನರಸಂಬಂಽ ಕಾಯಿಲೆಗಳಿಗೆ ದೀರ್ಘಕಾಲದ ಚಿಕಿತ್ಸೆ, ನಿಯಮಿತ ತಪಾಸಣೆ ಮತ್ತು ಪುನರ್ವಸತಿ ಸೇವೆಗಳ ಅಗತ್ಯವಿದೆ. ಪ್ರಸ್ತುತ ಇಂಥ ಸೇವೆಗಳನ್ನು ಪಡೆಯಲು ಜನರು ದೂರದ ಊರುಗಳನ್ನು ಅವಲಂಬಿಸಿದ್ದಾರೆ. ಇದು ಕುಟುಂಬಗಳಿಗೆ ಆರ್ಥಿಕ ಹಾಗೂ ದೈಹಿಕ ಹೊರೆಯಾಗಿ ಪರಿಣಮಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ೩೦೦ ಹಾಸಿಗೆ ಆಸ್ಪತ್ರೆ ಪುತ್ತೂರಿನಲ್ಲಿ ಆರಂಭವಾಗುವ ಹಿನ್ನೆಲೆಯಲ್ಲಿ ಈ ಮೂರೂ ಸಂಸ್ಥೆಗಳ ಪ್ರಾದೇಶಿಕ ಘಟಕಗಳು ಪುತ್ತೂರಿನಲ್ಲಿ ಸ್ಥಾಪಿತವಾಗುವುದರಿಂದ ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ವಾಳ ಭಾಗದ ಜನರಿಗೂ ಬಹಳಷ್ಟು ಅನುಕೂಲವಾಗಲಿದೆ. ಮೆಡಿಕಲ್ ಹಬ್ ಮಾಡಬೇಕೆಂಬ ಅಶೋಕ್ ಕುಮಾರ್ ರೈ ಅವರ ಕನಸು ಸಾಕಾರಗೊಳ್ಳಲೂ ಇದು ವರದಾನವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ೩೦೦ ಹಾಸಿಗೆ ಆಸ್ಪತ್ರೆ ಪುತ್ತೂರಿನಲ್ಲಿ ಆರಂಭವಾಗುವ ಹಿನ್ನೆಲೆಯ್ಲಲ್ಲಿ ಈ ಮೂರೂ ಸಂಸ್ಥೆಗಳ ಪ್ರಾದೇಶಿಕ ಘಟಕಗಳು ಪುತ್ತೂರಿನಲ್ಲಿ ಸ್ಥಾಪಿತವಾಗುವುದರಿಂದ ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ವಾಳ ಭಾಗದ ಜನರಿಗೂ ಬಹಳಷ್ಟು ಅನುಕೂಲವಾಗಲಿದೆ. ಸುಮಾರು ೫೦ ಸಾವಿರ ಸಹಿ ಸಂಗ್ರಹ ಮಾಡಿ ಸರ್ಕಾರಕ್ಕೆ ಕಳುಹಿಸುವ ಗುರಿಯನ್ನು ಇಡಲಾಗಿದೆ. ಮೆಡಿಕಲ್ ಹಬ್ ಮಾಡಬೇಕೆಂಬ ಅಶೋಕ್ ಕುಮಾರ್ ರೈ ಅವರ ಕನಸು ಸಾಕಾರಗೊಳ್ಳಲೂ ಇದು ವರದಾನವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮೆಡಿಕಲ್ ಕಾಲೇಜು ಪುತ್ತೂರಿಗೆ ಆಗಮಿಸುತ್ತಿರುವ ಬೆನ್ನಲ್ಲೇ ಕಿದ್ವಾಯಿ, ನಿಮ್ಹಾನ್ಸ್, ಜಯದೇವ ಸಂಸ್ಥೆಗಳ ಪ್ರಾದೇಶಿಕ ಘಟಕಗಳನ್ನು ಒಂದೇ ಆವರಣದಲ್ಲಿ ಸ್ಥಾಪಿಸುವಂತೆ ಆಗ್ರಹಿಸಿ ಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿಯಿಂದ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಮುಖ್ಯಮಂತ್ರಿಗಳಿಗೆ ಬೇಡಿಕೆ ಪತ್ರ ರವಾನಿಸಲು ಸಿದ್ಧತೆ ನಡೆಯುತ್ತಿದೆ. ವಿವಿಧ ಕಾರ್ಯಕ್ರಮದಲ್ಲಿ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ರೋಗ ನಿರ್ಣಯ, ಚಿಕಿತ್ಸೆ, ಶಸ್ತ್ರಚಿಕಿತ್ಸೆಯಂತಹ ಸೌಲಭ್ಯಗಳು ಒಂದೇ ಸೂರಿನಡಿ ಸಿಗಬೇಕೆಂಬ ಬೇಡಿಕೆ ಇಡಲಾಗಿದೆ.