ಹಿರಿಯರ ನಿರ್ಲಕ್ಷ್ಯಕ್ಕೆ ದಂಡ, ಶಿಕ್ಷೆಯ ಅವಕಾಶ

ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು-ನೆರವು
 ಮೂಡುಬಿದಿರೆ ಆಡಳಿತ ಸೌದದಲ್ಲಿ ಹಿರಿಯ ನಾಗರಿಕರಿಗಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಫವಾಜ್ ಪಿ.ಎ., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಖಾದಿರ ಸಾಬ್ ನದಾಫ್, ನಿಟ್ಟೆ ವಿಶೇಷ ಮಕ್ಕಳ ಹಾರೈಕೆ ಕೇಂದ್ರದ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ್ ಶೆಟ್ಟಿ ಮೊದಲಾದವರಿದ್ದರು.
ಮೂಡುಬಿದಿರೆ ಆಡಳಿತ ಸೌದದಲ್ಲಿ ಹಿರಿಯ ನಾಗರಿಕರಿಗಾಗಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಫವಾಜ್ ಪಿ.ಎ., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಖಾದಿರ ಸಾಬ್ ನದಾಫ್, ನಿಟ್ಟೆ ವಿಶೇಷ ಮಕ್ಕಳ ಹಾರೈಕೆ ಕೇಂದ್ರದ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ್ ಶೆಟ್ಟಿ ಮೊದಲಾದವರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಹಿರಿಯ ನಾಗರಿಕರ ಹಕ್ಕುಗಳು ಮತ್ತು ಜೀವನ ನಿರ್ವಹಣೆಯ ರಕ್ಷಣೆಗೆ 2007ರ ಹಿರಿಯ ನಾಗರಿಕರ ಕಾಯ್ದೆಯಡಿ ಹಲವು ಅವಕಾಶಗಳಿವೆ. ಹಕ್ಕುಗಳಿಗೆ ತೊಂದರೆಯಾದ ಸಂದರ್ಭದಲ್ಲಿ ರೆವೆನ್ಯೂ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಆರ್‌ಡಿಒ) ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಈ ಅಧಿಕಾರವು ಸಾಮಾನ್ಯವಾಗಿ ಅಸಿಸ್ಟೆಂಟ್ ಕಮಿಷನರ್ ಹುದ್ದೆಯ ಅಧಿಕಾರಿಯ ವ್ಯಾಪ್ತಿಯಲ್ಲಿರುತ್ತದೆ ಎಂದು ಮೂಡುಬಿದಿರೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಫವಾಜ್ ಪಿ.ಎ.ಹೇಳಿದರು.

ಮೂಡುಬಿದಿರೆ ಆಡಳಿತ ಸೌಧ ಸಭಾಂಗಣದಲ್ಲಿ ಬುಧವಾರ 2026-27ನೇ ಸಾಲಿನ ಕೇಂದ್ರ ಸರ್ಕಾರದ ಹಿರಿಯ ನಾಗರಿಕರ ರಾಜ್ಯ ಕ್ರಿಯಾ ಯೋಜನೆಯಂತೆ ತಾಲೂಕು ಮಟ್ಟದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದ.ಕ. ಕಾನೂನು ಪ್ರಾಧಿಕಾರ ಮಂಗಳೂರು, ತಾಲೂಕು ಆಡಳಿತ ಸೌಧ ಮೂಡುಬಿದಿರೆ, ಮೂಡುಬಿದಿರೆ ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಖಾದಿರ ಸಾಬ್ ನದಾಫ್, ನಿಟ್ಟೆ ವಿಶೇಷ ಮಕ್ಕಳ ಹಾರೈಕೆ ಕೇಂದ್ರದ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ್ ಶೆಟ್ಟಿ, ಮೂಡುಬಿದಿರೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಪ್ರತಿಭಾ ಕೆ.ಸಿ., ಮೂಡುಬಿದಿರೆ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಅಂಗನವಾಡಿ ಕಾರ್ಯಕರ್ತರ ಮೇಲ್ವಿಚಾರಕಿ ವೀಣಾ ಎಸ್.ಹೆಗ್ಡೆ, ವಕೀಲರ ಸಂಘ ಮೂಡುಬಿದಿರೆಯ ಅಧ್ಯಕ್ಷ ಶರತ್ ಡಿ.ಶೆಟ್ಟಿ, ಇನ್ನರ್‌ವೀಲ್ ಉಪಾಧ್ಯಕ್ಷೆ ಅನಿತಾ ಪಿ.ಶೆಟ್ಟಿ, ಬಂಟರ ಮಹಿಳಾ ಸಂಘ ಮೂಡುಬಿದಿರೆಯ ಅಧ್ಯಕ್ಷೆ ಶೋಭಾ ಎಸ್.ಹೆಗ್ಡೆ, ಮೌಂಟ್ ರೊಸಾರಿಯೊ ಇನ್ಸ್ಟಿಟ್ಯೂಟ್ ಆಲಂಗಾರಿನ ನಿರ್ದೇಶಕಿ ಸಿಸ್ಟರ್ ಪ್ರೆಸಿಲ್ಲಾ ಡಿಮೆಲ್ಲೋ ಮುಖ್ಯ ಅತಿಥಿಗಳಾಗಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ವಕೀಲೆ ಗೌರಿ ಕೆ.ಎಸ್. ಭಾಗವಹಿಸಿದ್ದರು. ತಾಲೂಕು ಸಂಯೋಜಕ ಜಯಪ್ರಕಾಶ್ ಕುಲಾಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net