ಗ್ರಾಪಂ ವ್ಯವಸ್ಥೆಯಲ್ಲಿ ಜನಸ್ಪಂದನೆಗೆ ಆದ್ಯತೆ

ಕಟ್ಟಡಕ್ಕೆ ಶಂಕುಸ್ಥಾಪನೆ
 ದ.ಕ.ಜಿ.ಪಂ. ಮಂಗಳೂರು, ತಾಪಂ ಮಂಗಳೂರು, ಗಂಜಿಮಠ ಗ್ರಾಪಂ ವತಿಯಿಂದ ಸೋಮವಾರ ಗಂಜಿಮಠ ಪಶು ಆಸ್ಪತ್ರೆ ಬಳಿ ನಿರ್ಮಿಸಲು ಉದ್ದೇಶಿಸಲಾದ ಗ್ರಾಪಂ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಡಾ.ಭರತ್ ಶೆಟ್ಟಿ ನೆರವೇರಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಗಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಇದ್ದರು.
ದ.ಕ.ಜಿ.ಪಂ. ಮಂಗಳೂರು, ತಾಪಂ ಮಂಗಳೂರು, ಗಂಜಿಮಠ ಗ್ರಾಪಂ ವತಿಯಿಂದ ಸೋಮವಾರ ಗಂಜಿಮಠ ಪಶು ಆಸ್ಪತ್ರೆ ಬಳಿ ನಿರ್ಮಿಸಲು ಉದ್ದೇಶಿಸಲಾದ ಗ್ರಾಪಂ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಡಾ.ಭರತ್ ಶೆಟ್ಟಿ ನೆರವೇರಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಗಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಗುರುಪುರ

ಗ್ರಾಮಗಳಲ್ಲಿ ಸರ್ಕಾರಿ ಕಟ್ಟಡಗಳು ದೊಡ್ಡದಾಗಿರುವುದು ಮುಖ್ಯವಲ್ಲ. ಅಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಜನರ ಸಮಸ್ಯೆಗಳಿಗೆ ಹೇಗೆ ಪರಿಹಾರ ಸಿಗುತ್ತದೆ ಎಂಬುದರ ಮೇಲೆ ಗ್ರಾಮಗಳ ಅಭಿವೃದ್ಧಿ ಅವಲಂಭಿಸಿದೆ. ಗ್ರಾಮ ಪಂಚಾಯಿತಿಯಿಂದ ಜನರಿಗೆ ಉತ್ತಮ, ಶೀಘ್ರ ಸೇವೆ ಸಿಗಬೇಕು. ಈ ನಿಟ್ಟಿನಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪಂಚಾಯಿತಿ ಕಟ್ಟಡ ಕಾಮಗಾರಿ ಮುಂದಿನ ಚುನಾವಣೆಗಿಂತ ಪೂರ್ವದಲ್ಲಿ ಉದ್ಘಾಟನೆಗೊಳ್ಳುವಂತಾಗಲಿ ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ದ.ಕ.ಜಿ.ಪಂ. ಮಂಗಳೂರು, ತಾಪಂ ಮಂಗಳೂರು, ಗಂಜಿಮಠ ಗ್ರಾಪಂ ವತಿಯಿಂದ ಸೋಮವಾರ ಗಂಜಿಮಠ ಪಶು ಆಸ್ಪತ್ರೆ ಬಳಿ ನಿರ್ಮಿಸಲು ಉದ್ದೇಶಿಸಲಾದ ಗ್ರಾಪಂ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಗಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಮಾತನಾಡಿದರು. ಪಿಡಿಒ ಪ್ರಕಾಶ್ ಬಿ. ಪ್ರಸ್ತಾವಿಕ ಮಾತನಾಡಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಂಗಳೂರು ತಾಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಪಂಚಾಯಿತಿ ಆಡಳಿತಾಧಿಕಾರಿ ಜಯಪ್ರಕಾಶ್ ಕೆ.ಕೆ., ಜಿಪಂ ಮಾಜಿ ಸದಸ್ಯ ಕೃಷ್ಣ ಅಮೀನ್, ಗ್ರಾಮ ಕರಣಿಕ ಮೆಹಬೂಬ್, ಜಿಪಂ ಇಂಜಿನಿಯರ್ ಲಾಯ್ಡ, ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ಮಾಲತಿ, ಗ್ರಾಪಂ ನಿಕಟಪೂರ್ವ ಸದಸ್ಯರು, ಮಾಜಿ ಅಧ್ಯಕ್ಷ ನೋಣಯ್ಯ, ಮಾಜಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಪಂಚಾಯಿತಿ ಸಿಬ್ಬಂದಿ ವರ್ಗ, ಕಟ್ಟಡ ನಿರ್ಮಾಣದ ಗುತ್ತಿಗೆದಾರ ಸುನೀಲ್, ಗ್ರಾಮಸ್ಥರು ಇದ್ದರು. ಗಂಜಿಮಠ ಗ್ರಾಪಂ ದ್ವಿತೀಯ ಲೆಕ್ಕ ದರ್ಜೆ ಸಹಾಯಕ ಮಹಮ್ಮದ್ ಶರೀಫ್ ವಂದಿಸಿದರು. ತಾಪಂ ಸಿಬ್ಬಂದಿ ಜಯಪ್ರಕಾಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net