ಶಿಕ್ಷಣ, ಆರೋಗ್ಯಕ್ಕೆ ಇರಲಿ ಆದ್ಯತೆ

ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹಷೇರ್ಂದ್ರ ಕುಮಾರ್ ಮಾತನಾಡಿದರು. ಎಸ್.ಎಲ್.ಭೋಜೇಗೌಡ, ನಿತಿನ್ ಬಿ.ಟಿ., ಜಯಾನಂದ ಸುವರ್ಣ, ವಿಠ್ಠಲ ಮತ್ತಿತರರು ಇದ್ದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹಷೇರ್ಂದ್ರ ಕುಮಾರ್ ಮಾತನಾಡಿದರು. ಎಸ್.ಎಲ್.ಭೋಜೇಗೌಡ, ನಿತಿನ್ ಬಿ.ಟಿ., ಜಯಾನಂದ ಸುವರ್ಣ, ವಿಠ್ಠಲ ಮತ್ತಿತರರು ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶಿಕ್ಷಣ ಮತ್ತು ಆರೋಗ್ಯ ಎಲ್ಲರಿಗೂ ಸಿಗುವುದೇ ಸರ್ಕಾರದ ಆಶಯ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಣುತ್ತಿದೆ. ಜೀವನ ಶಿಕ್ಷಣ ನೀಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಸ್ವಾವಲಂಬಿ ಜೀವನದ ಅಡಿಪಾಯ ಹಾಕಿದೆ ಎಂದು ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಹೇಳಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಘ ಮತ್ತು ಎಸ್‌ಡಿಎಂ ಪಿಯು ಕಾಲೇಜಿನ ಜಂಟಿ ಆಶ್ರಯದಲ್ಲಿ ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿದರು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಾರ್ಲಪದವು ಕಾಲೇಜಿನ ಪ್ರಾಂಶುಪಾಲ ಜಯಾನಂದ ಎನ್.ಸುವರ್ಣ, ಎಡಪದವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೇಮನಾಥ ಶೆಟ್ಟಿ, ಮಂಗಳೂರು ಕೆನರಾ ಕಾಲೇಜಿನ ಉಪನ್ಯಾಸಕ ಸುಬ್ರಹ್ಮಣ್ಯ, ಕೊಣಾಜೆ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಡಿ.ಶೆಟ್ಟಿ, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕರಾದ ವಿ.ಕಿರಣಾ ಶೆಟ್ಟಿ, ಆಳ್ವಾಸ್ ಕಾಲೇಜಿನ ಕಚೇರಿ ಅಧೀಕ್ಷಕಿ ಅನಿತಾ ವಿ.ಜೈನ್ ವರನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ರಾಜೇಶ್ವರಿ ಎಚ್.ಎಚ್., ಡಾ.ನವೀನ್ ಶೆಟ್ಟಿ ಕೆ., ಡಾ.ಹರೀಶ್ ಎನ್., ಆನಂದ ಪಿ., ನಿತಿನ್ ಬಿ.ಟಿ., ಜಯಾನಂದ ಸುವರ್ಣ, ವಿಠ್ಠಲ ಅಬುರ, ಸೋಮಶೇಖರ ನಾಯಕ್, ಹರಿಪ್ರಕಾಶ್ ಬಿ., ಪ್ರೇಮನಾಥ ಶೆಟ್ಟಿ, ದುಗ್ಗಪ್ಪ ಎನ್., ಪೂರನ್ ವರ್ಮ, ಪ್ರೊ.ವಿಶ್ವನಾಥ್ ಪಿ. ಉಪಸ್ಥಿತರಿದ್ದರು.

ಎಸ್‌ಡಿಎಂ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ಸ್ವಾಗತಿಸಿ, ಕಾವೂರು ಕಾಲೇಜಿನ ಪ್ರಾಂಶುಪಾಲೆ ಮಮತಾ ಎ. ವಂದಿಸಿದರು. ಎಸ್‌ಡಿಎಂ ಪ್ರಾಧ್ಯಾಪಕ ಡಾ.ಮಹಾವೀರ ಜೈನ್ ಮತ್ತು ಬಲ್ಮಠ ಕಾಲೇಜಿನ ಉಪನ್ಯಾಸಕ ಉಮೇಶ್ ನಿರೂಪಿಸಿದರು.

ಸನ್ಮಾನ

ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪಡೆದ ಉಪ್ಪಿನಂಗಡಿ ಕಾಲೇಜಿನ ಉಪನ್ಯಾಸಕ ಇಬ್ರಾಹಿಂ, ಅನುದಾನಿತ ಪದವಿ ಪೂರ್ವ ಕಾಲೇಜುಗಳ ನೌಕರರ ಸಂಘದ ಕಾರ್ಯಾಧ್ಯಕ್ಷ ಹರೀಶ್ ಎನ್, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿವಿಠ್ಠಲ ಎ., ರಾಷ್ಟ್ರೀಯ ಸ್ವರ್ಣ ಕಮಲ ಪದಕ ಪ್ರಶಸ್ತಿ ವಿಜೇತ ಸುಳ್ಯ ಸರ್ಕಾರಿ ಕಾಲೇಜಿನ ಉಪನ್ಯಾಸಕ ಡಾ.ಪ್ರದೀಪ್ ಕೆಂಚನೂರು ಅವರನ್ನು ಗೌರವಿಸಲಾಯಿತು. ಶೇ.100 ಫಲಿತಾಂಶ ಪಡೆದ ಜಿಲ್ಲೆಯ 78 ಕಾಲೇಜುಗಳ ಪ್ರಾಂಶುಪಾಲರನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಂದಿನ ಕಾಲಮಾನದಲ್ಲಿ ಸಾಮಾಜಿಕ ಜಾಲತಾಣಗಳಿಂದ ಮಕ್ಕಳನ್ನು ಹೊರತಂದು ಅವರ ಸರ್ವತೋಮುಖ ಬೆಳವಣಿಗೆಗೆ ಎಲ್ಲ ಶಿಕ್ಷಕರು ಅವಿರತವಾಗಿ ಶ್ರಮಿಸಬೇಕು ಎಂದರು.
ಡಿ.ಹರ್ಷೇಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net