ಧಾರ್ಮಿಕ ಆಚರಣೆಯಿಂದ ಸಮಾಜದಲ್ಲಿ ಒಗ್ಗಟ್ಟು PUTTUR

ಎಡನೀರು ಸ್ವಾಮೀಜಿ ಆಶೀರ್ವಚನ | ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮ
piligobbu puttur
ವಿಜಯ ಸಾಮ್ರಾಟ್ ಆಶ್ರಯದ ನಾಲ್ಕನೇ ವರ್ಷದ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾಲನೆ ನೀಡಿದರು. ಪಂಜಿಗುಡ್ಡೆ ಈಶ್ವರ ಭಟ್, ಸಹಜ್ ಜೆ.ರೈ ಬಳಜ್ಜ, ಟಿ.ಶ್ಯಾಮ ಭಟ್ ಮೊದಲಾದವರು ಇದ್ದರು.
Published on: 

ಪುತ್ತೂರು: ಪ್ರಕೃತಿಯನ್ನು ಆರಾಧಿಸುವ ಜತೆಗೆ ಪ್ರೀತಿಸಬೇಕು. ಹುಲಿಕುಣಿತ ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಕಲೆ ಮತ್ತು ಭಕ್ತಿಯ ಸಂಗಮವಾಗಿದೆ. ಹಬ್ಬಗಳ ಆಚರಣೆ ವಿಶೇಷ ಸಂದೇಶವನ್ನು ನೀಡುತ್ತದೆ. ಧಾರ್ಮಿಕ ಕಾರ್ಯಕ್ರಮದ ಮೂಲಕ ಸಮಾಜ ಒಗ್ಗಟ್ಟಾಗಬೇಕು. ಯುವ ಸಮುದಾಯಕ್ಕೆ ಧಾರ್ಮಿಕ ಸಂಸ್ಕೃತಿಯ ಅರಿವು ಮೂಡಿಸಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರುಗದ್ದೆಯಲ್ಲಿ ವಿಜಯ ಸಾಮ್ರಾಟ್ ಆಶ್ರಯದಲ್ಲಿ ಶನಿವಾರ ನಾಲ್ಕನೇ ವರ್ಷದ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ವಿಶೇಷತೆಯಿದ್ದು, ನವರಾತ್ರಿಗೆ ಹೆಚ್ಚಿನ ಮಹತ್ವವಿದೆ. ಹುಲಿ ಕುಣಿತದಿಂದ ದೇವಿ ಸಂತುಷ್ಟಗೊಳ್ಳುವಳೆಂಬ ನಂಬಿಕೆಯಿದೆ. ತುಳುನಾಡಿನ ಆಚರಣೆಗಳಿಗೆ ಹೊಸ ಆಯಾಮ ಸಿಗುತ್ತಿದೆ ಎಂದರು.

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಚಣಿಲ ತಿಮ್ಮಪ್ಪ ಶೆಟ್ಟಿ, ಡಾ.ಪ್ರಸಾದ್ ಭಂಡಾರಿ, ದೇವಸ್ಥಾನಾ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಉಮೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷ ರತನ್ ರೈ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.

ಜೀವಿಕಾ ಕಜೆ ಪ್ರಾರ್ಥಿಸಿದರು. ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ್ ಜೆ.ರೈ ಬಳಜ್ಜ ಸ್ವಾಗತಿಸಿದರು. ವಿಖ್ಯಾತ ಕಾರ್ಯಕ್ರಮ ನಿರೂಪಿಸಿದರು.

ಫುಡ್ ಫೆಸ್ಟ್

ಪಿಲಿಗೊಬ್ಬು ಕಾರ್ಯಕ್ರಮದ ಜತೆಗೆ ಆಹಾರ ಪ್ರಿಯರಿಗೆ ಪುಢ್-ಸ್ಟ್ ಇನ್ನಷ್ಟು ಸ್ವಾದವನ್ನು ನೀಡುತ್ತಿದೆ. ಗೀ ಪುಡ್ಡಿಂಗ್, ಗೀ ಮಿನಿ ಇಡ್ಲಿ, ವಿವಿಧ ಬಗೆಯ ದೋಸೆಗಳು, ಐಸ್‌ಕ್ರೀಂ, ಕರಾವಳಿ ಭಾಗದ ಸಾಂಪ್ರದಾಯಿಕ ತಿನಿಸುಗಳು ಆಹಾರ ಪ್ರಿಯರನ್ನು ಸೆಳೆದವು. ಸುಮಾರು ೫೦ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net