ವೈದ್ಯಕೀಯ ಕ್ಷೇತ್ರದಲ್ಲಿ ಪರಿಶ್ರಮ ಅಗತ್ಯ

ವೈದ್ಯಕೀಯ ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಉನ್ನತ ಗುರಿ ಹೊಂದಿ ಭವಿಷ್ಯದ ವೈದ್ಯರಾಗಿ ತಮ್ಮದೇ ಮಾನದಂಡಗಳನ್ನು ರೂಪಿಸಿಕೊಂಡು ಶ್ರೇಷ್ಠತೆಯತ್ತ ಸಾಗಬೇಕು ಎಂದು ಮೂಡಿಗೆರೆ ಹೊಯ್ಸಳ ಹೆಲ್ತ್‌ಕೇರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಅರ್ಪಿತಾ ಪ್ರತಾಪ್ ಸಿಂಹ ಹೇಳಿದರು.
ಆಳ್ವಾಸ್ ಆರಂಭಂ ಕಾರ್ಯಕ್ರಮದಲ್ಲಿ ಡಾ.ಅರ್ಪಿತಾ ಪ್ರತಾಪ್ ಸಿಂಹ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವಿವೇಕ್ ಆಳ್ವ, ಡಾ.ವನಿತಾ ಶೆಟ್ಟಿ, ಡಾ.ವಿದ್ಯಾರಾಣಿ ಮತ್ತಿತರರು ಉಪಸ್ಥಿತರಿದ್ದರು.
ಆಳ್ವಾಸ್ ಆರಂಭಂ ಕಾರ್ಯಕ್ರಮದಲ್ಲಿ ಡಾ.ಅರ್ಪಿತಾ ಪ್ರತಾಪ್ ಸಿಂಹ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವಿವೇಕ್ ಆಳ್ವ, ಡಾ.ವನಿತಾ ಶೆಟ್ಟಿ, ಡಾ.ವಿದ್ಯಾರಾಣಿ ಮತ್ತಿತರರು ಉಪಸ್ಥಿತರಿದ್ದರು.
Published on: 

ಮೂಡುಬಿದಿರೆ: ವೈದ್ಯಕೀಯ ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಉನ್ನತ ಗುರಿ ಹೊಂದಿ ಭವಿಷ್ಯದ ವೈದ್ಯರಾಗಿ ತಮ್ಮದೇ ಮಾನದಂಡಗಳನ್ನು ರೂಪಿಸಿಕೊಂಡು ಶ್ರೇಷ್ಠತೆಯತ್ತ ಸಾಗಬೇಕು ಎಂದು ಮೂಡಿಗೆರೆ ಹೊಯ್ಸಳ ಹೆಲ್ತ್‌ಕೇರ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಅರ್ಪಿತಾ ಪ್ರತಾಪ್ ಸಿಂಹ ಹೇಳಿದರು.

ಮಿಜಾರು ಆವರಣದ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 24ನೇ ಪದವಿ, 13ನೇ ಸ್ನಾತಕೋತ್ತರ ಪದವಿ ಬ್ಯಾಚ್‌ಗಳ ‘ಆರಂಭಂ’ ಶೈಕ್ಷಣಿಕ ವರ್ಷದ ಪ್ರಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿ, ಶ್ರೇಷ್ಠತೆಗೆ ಕಠಿಣ ಪರಿಶ್ರಮದ ಜತೆಗೆ ಹೊಸ ಅವಕಾಶಗಳನ್ನು ಸ್ವೀಕರಿಸುವ ಧೈರ್ಯ ಅಗತ್ಯ. ಪಠ್ಯಕ್ರಮದ ಜತೆಗೆ ಸಂಶೋಧನೆಗೆ ಆದ್ಯತೆ ನೀಡಿ ಗುಣಮಟ್ಟದ ಲೇಖನ ಪ್ರಕಟಿಸುವಂತೆ ಸಲಹೆ ನೀಡಿದರು.

ವಿದ್ಯಾರ್ಥಿ ವಿಕಾಸ್ ಸರ್ವಾಂಗಾಸನ ಭಂಗಿಯಲ್ಲಿ ದೀರ್ಘಕಾಲ ಇದ್ದ ಸಾಧನೆಗಾಗಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾನ್ಯತೆ ಪಡೆದಿರುವುದನ್ನು ಗುರುತಿಸಲಾಯಿತು. ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ, ಉಪಪ್ರಾಂಶುಪಾಲೆ ಡಾ.ವಿದ್ಯಾರಾಣಿ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ.ರಶ್ಮಿತಾ ಆಳ್ವ ವಂದಿಸಿದರು. ಯೋಗೇಶ್ವರನ್ ಎಂ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net