ಪಂಚಶಕ್ತಿ ಸಹಕಾರಿಗೆ 13 ಲಕ್ಷ ರೂ. ಲಾಭ

ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ 2025-26ನೇ ಸಾಲಿನಲ್ಲಿ 13 ಲಕ್ಷ ರೂ. ಲಾಭ ಗಳಿಸಿದ್ದು, ಶೇ.12 ಡಿವಿಡೆಂಡ್ ನೀಡಲಾಗವುದು ಎಂದು ಅಧ್ಯಕ್ಷ ರಂಜಿತ್ ಪೂಜಾರಿ ಘೋಷಿಸಿದರು.
ಶ್ರೀ ಪಂಚಶಕ್ತಿ ವಿ.ಎಸ್.ಎಸ್.ನ 12ನೇ ವಾರ್ಷಿಕ ಮಹಾಸಭೆಯಲ್ಲಿ ರಂಜಿತ್ ಪೂಜಾರಿ, ಯು.ರಾಜಶೇಖರ್, ಸುರೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಪಂಚಶಕ್ತಿ ವಿ.ಎಸ್.ಎಸ್.ನ 12ನೇ ವಾರ್ಷಿಕ ಮಹಾಸಭೆಯಲ್ಲಿ ರಂಜಿತ್ ಪೂಜಾರಿ, ಯು.ರಾಜಶೇಖರ್, ಸುರೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Published on

ಮೂಡುಬಿದಿರೆ: ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ 2025-26ನೇ ಸಾಲಿನಲ್ಲಿ 13 ಲಕ್ಷ ರೂ. ಲಾಭ ಗಳಿಸಿದ್ದು, ಶೇ.12 ಡಿವಿಡೆಂಡ್ ನೀಡಲಾಗವುದು ಎಂದು ಅಧ್ಯಕ್ಷ ರಂಜಿತ್ ಪೂಜಾರಿ ಘೋಷಿಸಿದರು.

ಭಾನುವಾರ 12ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2025-26ನೇ ಸಾಲಿನ ಆರ್ಥಿಕ ಸಾಧನೆಯನ್ನು ವಿವರಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯು.ರಾಜಶೇಖರ್ ಮಧ್ಯಸ್ಥ ಮಹಾಸಭೆಯ ನೋಟಿಸ್ ಓದಿ ದಾಖಲಿಸಿದರು. ನಿರ್ದೇಶಕ ಸುರೇಶ್ ಪೂಜಾರಿ 2024-25ನೇ ಸಾಲಿನ ಮಹಾಸಭೆಯ ನಡವಳಿ ಓದಿದರು. ಗಣೇಶ್ ಆರ್.ನಾಯ್ಕ 2025-26ನೇ ಸಾಲಿನ ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಬಜೆಟ್‌ಗಿಂತ ಹೆಚ್ಚಾದ ಖರ್ಚಿನ ಕುರಿತು ಸ್ವಾತಿ ಮಂಡಿಸಿ ಮಂಜೂರಾತಿ ಪಡೆದುಕೊಂಡರು. ನಿರ್ದೇಶಕ ರಾಜೇಂದ್ರ ಬಿ. ಲಾಭಾಂಶ ವಿಂಗಡಿಸಿದರು. ಶರತ್ ಜೆ.ಶೆಟ್ಟಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಲೆಕ್ಕಪರಿಶೋಧನೆ ಮಂಡಿಸಿದರು. ರೇಖಾ ಕೋಟ್ಯಾನ್ ಮಾಹಿತಿ ನೀಡಿದರು. ಪ್ರತಿಭಾ ಸ್ವಸಹಾಯ ತಂಡದ ಮೂರು ವರ್ಷದ ಲಾಭಾಂಶ ಮಂಡಿಸಿದರು.

ನಿರ್ದೇಶಕರಾದ ರವೀಂದ್ರ ಕರ್ಕೇರ, ರತ್ನಾಕರ ಪೂಜಾರಿ, ನಾಗೇಶ್ ನಾಯಕ್, ಮೀನಾಕ್ಷಿ ಎಸ್.ಅಂಚನ್ ಉಪಸ್ಥಿತರಿದ್ದರು.ನಿರ್ದೇಶಕ ರಮೇಶ ಎಸ್.ಶೆಟ್ಟಿ ಸ್ವಾಗತಿಸಿದರು. ಗೋಪಾಲ್ ಶೆಟ್ಟಿಗಾರ್ ನಿರೂಪಿಸಿದರು. ನಿರ್ದೇಶಕಿ ಉಷಾ ಭಂಡಾರಿ ವಂದಿಸಿದರು.

ವಿದ್ಯಾರ್ಥಿವೇತನ ವಿತರಣೆ

ಎಸ್ಸೆಸ್ಸೆಲ್ಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಸ್ವಸಹಾಯ ತಂಡದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉತ್ತಮ ಗ್ರಾಹಕರಾದ ಎಂ.ಎಸ್.ಜೈನುದ್ದೀನ್, ಬಿಸಿಸಿ ವಿದ್ಯಾಗಿರಿ, ಶುಭಕರ, ಗೋಪಾಲ ಶೆಟ್ಟಿ, ಪುಷ್ಪಾವತಿ, ಲೋಕೇಶ್, ವಿಜಯ ಅವರನ್ನು ಗೌರವಿಸಲಾಯಿತು. ಅತಿ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ದಿನೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net