ಬುಧವಾರ ಮೂಲ್ಕಿ ಪ್ರಜಾ ಸೌಧ ಕಟ್ಟಡಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಇಲಾಖಾಧಿಕಾರಿಗಳ ಜತೆಗೆ ಆಗಮಿಸಿ ಸಮಗ್ರ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ, ಉಳಿಕೆ ಕಾಮಗಾರಿಗಳ ಅಡೆತಡೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅನುದಾನ ಜೋಡಣೆ ಬಗ್ಗೆ ಮಾಹಿತಿ ನೀಡಿದರು.
ಶೇ.99ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 2 ಕೋಟಿ ರೂ.ನಷ್ಟು ಕಾಮಗಾರಿ ಬಾಕಿ ಉಳಿದಿದ್ದು, ಶೀಘ್ರ ಕಾಮಗಾರಿ ನಡೆಸಲು ಹೇಳಿದರು. ಲಿಫ್ಟ್, ಪೈಂಟಿಂಗ್, ಪೀಠೋಪಕರಣ ಕಾಮಗಾರಿ ಬಾಕಿ ಇದ್ದು, 20 ದಿನದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹೊಸದಾಗಿ ಅನುದಾನ ಜೋಡಣೆ ಬಗ್ಗೆ ಪರಿಶೀಲಿಸಿ ಸರ್ಕಾರದಿಂದ ಅನುದಾನ ಒದಗಿಸಿಕೊಡಲು ಪ್ರಯತ್ನಿಸಲಾಗುವುದು. ಬಳಿಕ ಸಚಿವರು ಹಾಗೂ ಇಲಾಖಾಧಿಕಾರಿಗಳ ಜತೆ ಚರ್ಚಿಸಿ ಪ್ರಜಾ ಸೌಧ ಉದ್ಘಾಟನೆಗೆ ದಿನ ನಿಗದಿಪಡಿಸಲಾಗುವುದು ಎಂದರು.
ಹೌಸಿಂಗ್ ಬೋರ್ಡ್ ಎಇಇ ಸಹನಾ, ಪ್ರಜಾ ಸೌಧ ಕಟ್ಟಡದ ಸುತ್ತ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ 1.60 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆ ದೊರೆಯಬೇಕಿದೆ ಎಂದರು.
ಮೂಲ್ಕಿ ತಹಸೀಲ್ದಾರ್ ಕಚೇರಿ, ಟ್ರೆಜರಿ, ಸಬ್ ರಿಜಿಸ್ಟ್ರಾರ್, ಶಾಸಕರ ಕಚೇರಿ ಸಹಿತ ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಪ್ರಜಾ ಸೌಧ ಕಟ್ಟಡದ ಉಳಿಕೆ ಕಾಮಗಾರಿ ಶೀಘ್ರ ಮುಗಿಸಲಾಗುವುದು. ಆದಷ್ಟು ಬೇಗ ಕಟ್ಟಡ ಲೋಕಾರ್ಪಣೆಯಾಗಲಿದೆ.