ರೈಲಿನಲ್ಲಿ ಮೊಬೈಲ್ ಫೋನ್ ಕಳವು

ಕಣ್ಣೂರು ರೈಲ್ವೆ ಪೊಲೀಸರು ಕೇಸು ದಾಖಲು
mobile photo
ಮೊಬೈಲ್ ಫೋನ್
Published on: 

ಕಾಸರಗೋಡು: ರೈಲಿನ ಬೋಗಿಯಲ್ಲಿ ಚಾರ್ಜ್‌ಗೆ ಇಟ್ಟಿದ್ದ ಮೊಬೈಲ್ ಕಳವಾಗಿರುವ ಬಗ್ಗೆ ಕಣ್ಣೂರು ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಪಳ್ಳಿಕೆರೆ ನಿವಾಸಿ ಎಸ್.ಸುಭಾಷ್ ಎಂಬುವರ ದೂರಿನನ್ವಯ ಈ ಕೇಸು. ಪುದುಚ್ಚೇರಿ ಎಕ್ಸ್‌ಪ್ರೆಸ್ ರೈಲಿನ ಎಸ್.8ನೇ ಸಂಖ್ಯೆಯ ಬೋಗಿಯಲ್ಲಿ ಶುಕ್ರವಾರ ಕಣ್ಣೂರಿಗೆ ಆಗಮಿಸುತ್ತಿದ್ದ ಸಂದರ್ಭ ಚಾರ್ಜ್‌ಗೆ ಇರಿಸಿದ್ದ ಮೊಬೈಲ್ ಕಳವಿಗೀಡಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.