ಎಸ್‌ಸಿಎಸ್ ಶಿಕ್ಷಣ ಸಂಸ್ಥೆ ಡೀಮ್ಡ್ ವಿವಿ ಆಗಲಿ: ನಿಟ್ಟೆ ವಿವಿ ಪ್ರೊ.ಡಾ. ಸುಧೀರ್ ರಾಜ್ ಕೆ. ಆಶಯ

ಎಸ್‌ಸಿಎಸ್ ಆಯುರ್ವೇದ ಕಾಲೇಜು ಪದವಿ ಪ್ರದಾನ
 ಉರ್ವದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎಸ್‌ಸಿಎಸ್ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ 17ನೇ ವರ್ಷದ ಪದವಿ ಪ್ರದಾನ ಸಮಾರಂಭ ನಡೆಯಿತು. ಡಾ. ಸುಧೀರ್ ರಾಜ್ ಕೆ., ಡಾ. ಅಭಿನವ್ ಸೊರಕೆ, ಡಾ. ಯುಕೆ. ಖಾಲಿದ್, ಡಾ. ಉದಯ ಡಿ.ಕೆ. ಡಾ. ಸಜೀತ್ ಎಂ. ಉಪಸ್ಥಿತರಿದ್ದರು.
ಉರ್ವದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎಸ್‌ಸಿಎಸ್ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ 17ನೇ ವರ್ಷದ ಪದವಿ ಪ್ರದಾನ ಸಮಾರಂಭ ನಡೆಯಿತು. ಡಾ. ಸುಧೀರ್ ರಾಜ್ ಕೆ., ಡಾ. ಅಭಿನವ್ ಸೊರಕೆ, ಡಾ. ಯುಕೆ. ಖಾಲಿದ್, ಡಾ. ಉದಯ ಡಿ.ಕೆ. ಡಾ. ಸಜೀತ್ ಎಂ. ಉಪಸ್ಥಿತರಿದ್ದರು.
Published on: 

ಮಂಗಳೂರು: ಸೊರಕೆ ಚಂದ್ರಶೇಖರ್ ಅವರ ಆಶಯದಂತೆ ನಡೆಯುತ್ತಿರುವ ಮಂಗಳೂರಿನ ಎಸ್‌ಸಿಎಸ್ ಶಿಕ್ಷಣ ಸಂಸ್ಥೆಯು ಬೆಳೆಯುತ್ತಿದ್ದು, ಶೀಘ್ರದಲ್ಲೇ ಈ ಸಂಸ್ಥೆಯು ಡೀಮ್ಡ್ ಯೂನಿವರ್ಸಿಟಿ ಆಗಲಿ ಎಂದು ನಿಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನ ಪ್ರೊಫೆಸರ್ ಡಾ.ಸುಧೀರ್ ರಾಜ್ ಕೆ. ಅವರು ಆಶಯ ವ್ಯಕ್ತಪಡಿಸಿದರು.

ಉರ್ವದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಎಸ್‌ಸಿಎಸ್ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ 17ನೇ ವರ್ಷದ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವೈದ್ಯರನ್ನು ರೋಗಿಗಳು ದೇವರಂತೆ ಕಾಣುತ್ತಾರೆ. ಕೈಯನ್ನೂ ಮುಗಿಯುತ್ತಾರೆ. ರೋಗಿಗಳು ಮತ್ತು ಅವರ ಕುಟುಂಬಿಕರ ನೋವನ್ನು ಅರ್ಥ ಮಾಡಿಕೊಂಡು ಮಾನವೀಯತೆಯಿಂದ ಸೇವೆ ನೀಡಬೇಕು. ರೋಗಿಗಳ ನೋವನ್ನು ಆಲಿಸುವ ಮತ್ತು ಅವರಿಗೆ ಪುನರ್ಜನ್ಮ ನೀಡುವ ವೈದ್ಯರು ನೀವಾಗಬೇಕು. ಸಮಾಜ ನಿಮ್ಮನ್ನು ನೋಡುತ್ತಿರುತ್ತದೆ. ಜವಾಬ್ದಾರಿಯಿಂದ ಕರ್ತವ್ಯ ಮಾಡಬೇಕು. ರೋಗಿಗಳಿಗೆ ತಾಳ್ಮೆಯಿಂದ ಪ್ರೀತಿ, ನಂಬಿಕೆ, ವಿಶ್ವಾಸದ ಸೇವೆ ಕೊಡಿ. ಸಂವೇದನಾಶೀಲತೆ ನಿಮ್ಮಲ್ಲಿರಲಿ ಎಂದು ಯುವ ವೈದ್ಯರಿಗೆ ಸುಧೀರ್ ರಾಜ್ ಕರೆ ನೀಡಿದರು.

ಎಐ ಅಲ್ಲ ಎಂಐ ಆಗಿ

ಈಗಿನ ಎಐ (ಆರ್ಟಿಫೀಷಿಯಲ್ ಇಂಟಲಿಜೆನ್ಸ್) ನೀವಾಗಬೇಡಿ. ನೀವು ಕೌಶಲಯುಕ್ತ ಎಂಐ (ಮೆಡಿಕಲ್ ಇಂಟಲಿಜೆನ್ಸ್) ಆಗಿ. ಯಾವತ್ತೂ ಪೋಷಕರು ಮತ್ತು ಶಿಕ್ಷಕರನ್ನು ಗೌರವಿಸಿ. ಆಯುರ್ವೇದ ಪ್ರಕೃತಿದತ್ತವಾಗಿ ಬೆಳೆದು ಬಂದಿರುವುದು. ಇದು ಇನ್ನೂ ಮಹತ್ವಪೂರ್ಣವಾಗಿ ಬೆಳೆಯಲಿದೆ. ಹಾಗಾಗಿ ಆಯುರ್ವೇದದಲ್ಲಿ ಉತ್ತಮ ಅವಕಾಶಗಳು ಒದಗಿ ಬರಲಿವೆ ಎಂದವರು ಹೇಳಿದರು.

ಎಸ್‌ಸಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಅಭಿನವ್ ಸೊರಕೆ ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಡಾ. ಯು.ಕೆ. ಖಾಲಿದ್ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಸಿಎಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ. ಸ್ವಾಗತಿಸಿದರು. ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಉದಯ ಡಿ.ಕೆ. ವಂದಿಸಿದರು. ಡಾ. ವಹೀದಾ ಬಾನು ವಾರ್ಷಿಕ ವರದಿ ವಾಚಿಸಿದರು. ಡಾ. ಶ್ವೇತಾ ಮತ್ತು ಡಾ. ಶಿವಾನಿ ಕಾರ್ಯಕ್ರಮ ನಿರೂಪಿಸಿದರು.

ಸಂಸ್ಥೆಯ ವತಿಯಿಂದ ಡಾ. ಸುಧೀರ್ ರಾಜ್ ಕೆ. ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ವತಿಯಿಂದ ಡಾ. ಸುಧೀರ್ ರಾಜ್ ಕೆ. ಅವರನ್ನು ಸನ್ಮಾನಿಸಲಾಯಿತು.

ಆಯುರ್ವೇದ ಕಾಲೇಜಿನ 87 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಅವರಿಗೆ ಸಂಹಿತಾ ಸಿದ್ಧಾಂತ ವಿಭಾಗದ ಎಚ್‌ಒಡಿ ಡಾ. ಸಂಚಿತಾ ಪ್ರತಿಜ್ಞಾ ವಿಧಿ ಬೋಧಿಸಿದರು. ಸಂಸ್ಥೆಯ ವತಿಯಿಂದ ಮುಖ್ಯ ಅತಿಥಿ ಡಾ. ಸುಧೀರ್ ರಾಜ್ ಕೆ. ಅವರನ್ನು ಸನ್ಮಾನಿಸಲಾಯಿತು.

ಎಲ್ಲಕ್ಕಿಂತ ಮೊದಲು ಆರೋಗ್ಯ

ವಿದ್ಯಾರ್ಥಿ ಜೀವನವೇ ಭವಿಷ್ಯದ ಅತ್ಯಂತ ಪ್ರಾಮುಖ್ಯವಾದ ಮೆಟ್ಟಿಲು. ಈ ಕಾಲಘಟ್ಟದಲ್ಲಿ ಗುರಿಯತ್ತ ಚಿತ್ತವಿರಲಿ. ನಾವು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಮೊದಲು ಆರೋಗ್ಯ ಮತ್ತು ಕುಟುಂಬವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಅವೆರಡು ಸರಿಯಾಗಿದ್ದರೆ ಭವಿಷ್ಯ ತನ್ನಿಂದ ತಾನಾಗಿಯೇ ರೂಪಿಸಿಕೊಳ್ಳಬಹುದು. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಡಾ. ಸುಧೀರ್ ರಾಜ್ ಹೇಳಿದರು.

ರಾಷ್ಟ್ರ ನಿರ್ಮಾಣದ ಸೇವಕರಾಗಿ ಯುವ ವೈದ್ಯರು ಜವಾಬ್ದಾರಿಯೊಂದಿಗೆ ಮಾನವೀಯತೆಯನ್ನು ಮರೆಯಬೇಡಿ. ಸಾಮಾಜಿಕ ಜವಾಬ್ದಾರಿಯೊಂದಿಗೆ ನಮ್ಮ ಸಂಸ್ಥೆಯು ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಿಗೆ ಒತ್ತು ನೀಡುತ್ತಿವೆ. ಸೇವೆ ನೀಡುತ್ತಲೇ ಮೇಲ್ದರ್ಜೆಗೇರುತ್ತಾ ನಮ್ಮ ಜಾಲ ವಿಸ್ತರಣೆಯಾಗುತ್ತಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಭವಿಷ್ಯದ ಭದ್ರ ರಾಷ್ಟ್ರ ನಿರ್ಮಾಣದ ಸೇವಕರಾಗಬೇಕು.
ಡಾ. ಯು.ಕೆ. ಖಾಲಿದ್, ಎಸ್‌ಸಿಎಸ್ ಆಡಳಿತಾಧಿಕಾರಿ