ಮಾಣಿಲ ಶ್ರೀಧಾಮ ಶರನ್ನವರಾತ್ರಿ ಮಹೋತ್ಸವ MANILA

Published on: 

ವಿಟ್ಲ: ಮಾಣಿಲ ಶ್ರೀಧಾರಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ೨೭ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಕರ್ಮಯೋಗಿ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ಅ.೧೧ರಿಂದ ೨೩ರವರೆಗೆ ನಡೆಯಲಿದೆ.

೧೧ರಂದು ಬೆಳಗ್ಗೆ ದ್ವಾದಶ ನಾಳಿಕೇರ ಗಣಪತಿ ಹವನ, ಕೊಪ್ಪರಿಗೆ ಮುಹೂರ್ತ ನಡೆಯಲಿದೆ. ೧೧ರಿಂದ ೨೧ರ ತನಕ ಪ್ರತಿದಿನ ಕುಂಭೇಶ್ವರಿ ಪೂಜೆ, ಗುರುಪೂಜೆ, ಗೋಪೂಜೆ, ನಾಗನಿಗೆ ಕ್ಷೀರಾಭಿಷೇಕ, ಚಂಡಿಕಾ ಯಾಗ, ಸಾಮೂಹಿಕ ಕುಂಕುಮಾರ್ಚನೆ, ಸಂಜೆ ದೀಪ ಪ್ರತಿಷ್ಠಾಪನೆ, ದುರ್ಗಾನಮಸ್ಕಾರ ಪೂಜೆ, ಲಲಿತಾ ಸಹಸ್ರನಾಮಾರ್ಚನೆ ನಡೆಯಲಿದೆ.

೨೨ರಂದು ಕುಂಭೇಶ್ವರಿ ಪೂಜೆ, ಗುರುಪೂಜೆ, ಗೋಪೂಜೆ, ನಾಗನಿಗೆ ಕ್ಷೀರಾಭಿಷೇಕ, ಬಳಿಕ ದತ್ತಯಾಗ, ಧನ್ವಂತರಿ ಯಾಗ, ಚಂಡಿಕಾ ಯಾಗ, ಪೂರ್ಣಾಹುತಿ ಬಳಿಕ ಸ್ವಾಮೀಜಿ ಅವರಿಂದ ಮಧುಕರಿ, ಮಹಾಪೂಜೆ, ಧಾರ್ಮಿಕ ಸಭೆ, ಸ್ವರ್ಣ ಮಂತ್ರಾಕ್ಷತೆ, ಮಹಾ ಅನ್ನ ಸಂತರ್ಪಣೆ, ಭಜನಾ ಸಂಕೀರ್ತನೆ, ಸಂಜೆ ನಾಟ್ಯವೈಭವ, ಬಳಿಕ ದುರ್ಗಾ ನಮಸ್ಕಾರ ಪೂಜೆ, ಅಷ್ಟಾವಧಾನ ಸೇವೆ ನೆರವೇರಲಿದೆ. ರಾತ್ರಿ ಮಾಣಿಲ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರಿಂದ ಬ್ರಹ್ಮಕಪಾಲ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ೨೩ರಂದು ಸೀಯಾಳಾಭಿಷೇಕ ಮತ್ತು ನಾಗತಂಬಿಲ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net