ವಿಟ್ಲ: ಕುಳಾಲು ಪ್ರದೇಶದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಬೇಕೆಂಬ ದಶಕಗಳ ಬೇಡಿಕೆ ಇನ್ನೂ ಈಡೇರಿಲ್ಲ. ದಶಕದ ಹಿಂದೆ ಇದಕ್ಕೆ ಜಗ ಗುರುತಿಸಿ ಪಹಣಿ ಮಾಡಲಾಗಿದೆ. ಈ ಜಗದಲ್ಲಿ ಆರೋಗ್ಯ ಹಾಗೂ ಕ್ಷೇಮ ಕೇಂದ್ರ ನಿರ್ಮಾಣಕ್ಕೆ ಕಳೆದ ಮೇ ೨೨ರಂದು ಕಾಮಗಾರಿಗೆ ಶಿಲಾನ್ಯಾಸ ನಡೆಸಲಾಗಿತ್ತು. ಈಗ ಮಂಜೂರಾದ ಪ್ರದೇಶ ಸ್ಥಳಾಂತರ ಆಗಬೇಕೆಂಬ ಕೂಗು ಪ್ರಾರಂಭವಾಗಿ, ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಅಡಚಣೆ ಎದುರಾಗಿದೆ.
ಕುಗ್ರಾಮವಾಗಿದ್ದ ಕುಳಾಲಿಗೆ ಮೂಲಸೌಕರ್ಯ ಒದಗಿಸುವ ಪ್ರಯತ್ನ ಕೆಲವು ವರ್ಷಗಳಿಂದ ಮಾಡಲಾಗಿದ್ದು, ಜನರ ಬೇಡಿಕೆಯಂತೆ ೨೦೧೭ರಲ್ಲಿ ಕುಳಾಲು ಭಾಗದ ಸರ್ವೇ ನಂಬರ್ ೫೮೦/೧ರಲ್ಲಿರುವ ೯.೭೭ಎಕರೆ ಜಗದಲ್ಲಿ ೧೦ ಸೆಂಟ್ಸ್ ಜಗ ಆರೋಗ್ಯ ಕೇಂದ್ರಕ್ಕೆ ಮೀಸಲಿಡಲಾಗಿದೆ. ಜಮೀನಿನ ಕುಮ್ಕಿ, ಅರಣ್ಯ, ಗೋಮಾಳ, ರಸ್ತೆ, ಪರಂಬೋಕು ಇತ್ಯಾದಿ ಖಾತೆಗಳು ಇರುವುದಿಲ್ಲ. ನಮೂನೆ ೫೦, ೫೩ ಹಾಗೂ ೯೪ಸಿ., ೯೪ಸಿಸಿ ಅರ್ಜಿ ತನಿಖೆಗೆ ಬಾಕಿಯಿಲ್ಲ ಎಂದು ಜಾಗ ಮಂಜೂರಾತಿಯ ಸಮಯ ತಹಸೀಲ್ದಾರ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.
ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಕೊಳ್ನಾಡು ಗ್ರಾಪಂ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಗ ಕಾಯ್ದಿರಿಸಿದ್ದು, ಬಳಿಕ ಅನುದಾನಕ್ಕೂ ಅವರು ಪ್ರಯತ್ನ ಪಟ್ಟಿದ್ದಾರೆ. ೨೦೨೪ರ ಜುಲೈ ೮ರಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಆರೋಗ್ಯ ಇಲಾಖೆಗೆ ಪತ್ರ ಬರೆದು ಅನುದಾನ ನೀಡಲು ಆಗ್ರಹಿಸಿದ್ದರು.
ಆರೋಗ್ಯ ಇಲಾಖೆಗೆ ಕಾಯ್ದಿಟ್ಟ ಸರ್ಕಾರಿ ಜಗವನ್ನು ಆಟ ಮೈದಾನಕ್ಕೆ ಬೇಕೆಂದು ಹೇಳುವುದು ಸಮಂಜಸವಲ್ಲ. ಇಂತಹ ಬೇಡಿಕೆ ಕುಳಾಲಿನ ಜನ ಒಪ್ಪುವ ವಿಚಾರವಲ್ಲ. ಜನರ ಕಿರುಕುಳದಿಂದ ರದ್ದಾದರೆ ಮತ್ತೆ ಆ ಭಾಗಕ್ಕೆ ಆರೋಗ್ಯ ಕೇಂದ್ರಕ್ಕೆ ಅನುದಾನ ಲಭಿಸುವುದಿಲ್ಲ. ಜಗದ ಜಿಪಿಎಸ್ ಮಾಡಿದ ಬಳಿಕ ಆರೋಗ್ಯ ಕೇಂದ್ರದ ಟೆಂಡರ್ ಪ್ರಕ್ರಿಯೆ ನಡೆದಿದೆ. ಆರೋಗ್ಯ ಕೇಂದ್ರ ನಿಗದಿತ ಜಗದಲ್ಲೇ ಆಗಬೇಕು. ಹೆಚ್ಚು ಕಡಿಮೆ ಮಾಡಿದರೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಆರೋಗ್ಯ ಇಲಾಖೆಗೆ ಮಂಜೂರಾದ ಬಳಿಕ ಯುವಕರ ತಂಡ ನೆಲ ಸಮತಟ್ಪು ಮಾಡಿದೆ. ಇದಕ್ಕಾಗಿ ಮಾಡಿದ ಖರ್ಚು ನೀಡುವಂತೆ ಬೇಡಿಕೆ ಇಟ್ಟಿದ್ದು, ಗುತ್ತಿಗೆದಾರರು ಹಣ ನೀಡುವ ಭರವಸೆ ನೀಡಿದ್ದಾರೆ. ಕಾನೂನು ರೀತಿಯಲ್ಲಿ ಇದಕ್ಕೆ ಅವಕಾಶವಿಲ್ಲದಿದ್ದರೂ, ಮಾನವೀಯತೆಯಲ್ಲಿ ವ್ಯವಸ್ಥೆಗೆ ಮುಂದಾಗಿದ್ದಾರೆ. ಬೇರೆ ಸರ್ಕಾರಿ ಜಗವನ್ನು ತೋರಿಸಿದರೆ ಲೆವೆಲ್ ಮಾಡಿಕೊಡುವ ಔದಾರ್ಯ ತೋರಿಸಿದ್ದಾರೆ.
ಕುಳಾಲು ಯುವ ಫ್ರೆಂಡ್ಸ್ ಸೆ.೨೪ರಂದು ತಹಸೀಲ್ದಾರ್‌ಗೆ ಮಂಜೂರಾದ ಸ್ಥಳ ಬದಲಾವಣೆ ಮಾಡಲು ಅರ್ಜಿ ಸಲ್ಲಿದ್ದಾರೆ. ಜಗಕ್ಕೆ ಬಸ್ಸಿನ ವ್ಯವಸ್ಥೆ, ಅಟೋರಿಕ್ಷಾ ವ್ಯವಸ್ಥೆಯಿಲ್ಲ. ಮೂಲಸೌಕರ್ಯ ಇಲ್ಲದ ಪ್ರದೇಶ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ದೂರಿಗೆ ಸುಮಾರು ೨೮ಮಂದಿ ಸಹಿ ಮಾಡಿದ್ದು, ಅವರ ಮನೆಯವರೇ ಅಕ್ಕಪಕ್ಕದ ಸರ್ಕಾರಿ ಭೂಮಿಯನ್ನು ಡಾಂಬರು ರಸ್ತೆಯವರೆಗೆ ಸ್ವಾಽನ ಮಾಡಿ ಸಸಿ ಹಾಕಿ, ಬೇಲಿ ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ.