ವಿಟ್ಲ: ಕನ್ಯಾನ ಶಿರಂಕಲ್ಲು ನಂದರಬೆಟ್ಟು ನಿವಾಸಿ ಚೆನ್ನಯ ಪೂಜಾರಿ(೫೫) ಎಂಬುವರನ್ನು ಅವರ ಸಹೋದರನ ಪುತ್ರಿ ರಿಶಿಕಾ ಎಂಬಾಕೆ ಕೊಲೆಗೈದಿದ್ದಾಳೆ. ಮಾರಕಾಯುಧದಿಂದ ಚುಚ್ಚಿದ್ದರಿಂದ ಗಂಭೀರ ಗಾಯಗೊಂಡಿದ್ದ ಚೆನ್ನಯ ಪೂಜಾರಿ ಅವರನ್ನು ತಕ್ಷಣ ಕನ್ಯಾನ ಆಂಬುಲೆನ್ಸ್ ಮೂಲಕ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಮೃತಪಟ್ಟಿದ್ದಾರೆ. ಕುಟುಂಬದೊಳಗಿನ ಕಲಹ ಘಟನೆಗೆ ಕಾರಣ ಎನ್ನಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.