ಕುಡ್ಲ ಜಾಬ್ ಫೇರ್-2026 ಯಶಸ್ವಿ

ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ನಡೆದ ಜಾಬ್ ಫೇರ್
ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ನಡೆದ ಕುಡ್ಲ ಜಾಬ್ ಫೇರ್‌ನ್ನು ರಾಜಾ ಯೋಗಿ ನಿರ್ಮಲ್‌ನಾಥ್ ಮಹಾರಾಜ್ ಉದ್ಘಾಟಿಸಿ ಚಾಲನೆ ನೀಡಿದರು.
ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ನಡೆದ ಕುಡ್ಲ ಜಾಬ್ ಫೇರ್‌ನ್ನು ರಾಜಾ ಯೋಗಿ ನಿರ್ಮಲ್‌ನಾಥ್ ಮಹಾರಾಜ್ ಉದ್ಘಾಟಿಸಿ ಚಾಲನೆ ನೀಡಿದರು. ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ನಡೆದ ಕುಡ್ಲ ಜಾಬ್ ಫೇರ್‌ನ್ನು ರಾಜಾ ಯೋಗಿ ನಿರ್ಮಲ್‌ನಾಥ್ ಮಹಾರಾಜ್ ಉದ್ಘಾಟಿಸಿ ಚಾಲನೆ ನೀಡಿದರು.
Published on

ಮಂಗಳೂರು: ಸಮಾಜಮುಖಿ ಕಾರ್ಯದ ಮೂಲಕ ಗುರುತಿಸಿಕೊಂಡಿರುವ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಸಹಯೋಗದಲ್ಲಿ ಕದ್ರಿ ವತಿಯಿಂದ ಆಯೋಜಿಸಲಾದ ಕುಡ್ಲ ಜಾಬ್ ಫೇರ್-2026 ಭಾನುವಾರ ಯಶಸ್ವಿಯಾಗಿ ನಡೆಯಿತು.

ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ ನಡೆದ ಮೇಳವನ್ನು ರಾಜಾ ಯೋಗಿ ನಿರ್ಮಲ್‌ನಾಥ್ ಮಹಾರಾಜ್ ಉದ್ಘಾಟಿಸಿ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ಅಧ್ಯಕ್ಷತೆ ವಹಿಸಿದ್ದರು.

ನಿರುದ್ಯೋಗ ಸಮಸ್ಯೆಗೆ ಪರಿಹಾರವಾಗಿ ಸರ್ವರಿಗೂ ಮುಕ್ತವಾಗಿ ಆಯೋಜಿಸಿದ್ದ ಈ ಮೇಳದಲ್ಲಿ 40ಕ್ಕೂ ಅಧಿಕ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಿದ್ದವು.

ಸಾಫ್ಟ್‌ವೇರ್, ಆಟೋಮೊಬೈಲ್, ಬ್ಯಾಂಕಿಂಗ್, ವಿಮೆ, ಶಿಕ್ಷಣ, ರಿಟೈಲ್, ಹೆಲ್ತ್‌ಕೇರ್, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 1240 ಹುದ್ದೆಗಳು ಲಭ್ಯವಿದ್ದು, 1000ಕ್ಕೂ ಮಿಕ್ಕಿ ಆಕಾಂಕ್ಷಿಗಳು ನೋಂದಣಿ ಮಾಡಿಕೊಂಡು ಸಂದರ್ಶನದಲ್ಲಿ ಭಾಗವಹಿಸಿದ್ದರು. ಬೆಳಗ್ಗೆಯಿಂದಲೇ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಸ್ಥಳದಲ್ಲೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು, ಹೆಚ್ಚಿನವರು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿದ್ದರು.

ಕಾರ್ಯಕ್ರಮದ ಸಂಯೋಜಕ ಎಚ್.ಕೆ. ಪುರುಷೋತ್ತಮ್ ಪ್ರಾಸ್ತಾವಿಸಿದರು. ಸಂಘದ ಕಾರ್ಯದರ್ಶಿ ಹಾಗೂ ಸಂಯೋಜಕ ಯೋಗಿ ವರದರಾಜ್, ಖಜಾಂಚಿ ಹಾಗೂ ಸಂಯೋಜಕ ಎಲ್. ಯಶವಂತ್ ಕುಮಾರ್, ಸದಸ್ಯರು ಹಾಗೂ ಸಂಯೋಜಕರಾದ ಎಚ್.ಕೆ. ಪುರುಷೋತ್ತಮ್, ಹರೀಶ್ ಕುಮಾರ್ ಕೆ, ಆಂತರಿಕ ಲೆಕ್ಕ ಪರಿಶೋಧಕ ಹಾಗೂ ಸಂಯೋಜಕ ಕೆ. ಚಂದ್ರಶೇಖರ್, ಸುನಂದಾ ಕೆ, ಸೌಮ್ಯ ರಾಣಿ, ಯುವ ಘಟಕದ ಅಧ್ಯಕ್ಷ ಹಾಗೂ ಸಂಯೋಜಕ ಸನತ್, ಸದಸ್ಯರು ಹಾಗೂ ಸಂಯೋಜಕರಾದ ರಾಜೇಶ್ ಕದ್ರಿ, ಚಂದ್ರಕಲಾ ಡಿ ರಾವ್, ರಾಕೇಶ್ ಜೋಗಿ, ಸಂಯೋಜಕರಾದ ಸಚ್ಚಿದಾನಂದ ಕೆ, ವಿನೋದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net