

ಕಡಬ: ಯೋಜನೆ 40 ವರ್ಷಗಳಿಂದ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಯಾವುದೇ ಆಧಾರವಿಲ್ಲದೆ ಬ್ಯಾಂಕ್ಗಳು ಸಂಘದ ಸದಸ್ಯರಿಗೆ ಆರ್ಥಿಕ ನೆರವು ನೀಡಲು ನಿರಾಕರಿಸುತ್ತಿದ್ದ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆ ಅವರು ಆರ್ಥಿಕ ಸಂಕಷ್ಟದಲ್ಲಿರುವ ಸದಸ್ಯರಿಗೆ ಕಡಿಮೆ ಬಡ್ಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆಯಲು ಸಹಕಾರಿಯಾದರು ಎಂದು ಧರ್ಮಸ್ಥಳ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಆನಂದ ಸುವರ್ಣ ಹೇಳಿದರು.
ಬಿಳಿನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ಮತ್ತು ಐತ್ತೂರು ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ವಲಯ ಭಜನಾ ಪರಿಷತ್ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಸುಬ್ರಹ್ಮಣ್ಯೇಶ್ವರ ಎಜುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಕೃಷ್ಣ ಶರ್ಮ ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಗೊಪಾಲಕೃಷ್ಣ ಪ್ರೌಢಶಾಲೆ ನಿವೃತ್ತ ಶಿಕ್ಷಕ ಹಿರಿಯಣ್ಣ ಅಮೈ ಕುಣಿತ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು. ಸಂತೋಷ್ ಕುಮಾರ್ ಕೇನ್ಯ ಅಧ್ಯಕ್ಷತೆ ವಹಿಸಿದ್ದರು.
ನೂತನ ವಲಯಾಧ್ಯಕ್ಷ ಸತೀಶ್ ಎರ್ಕ, ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ, ವಕೀಲ ಲೊಕೇಶ್ ಎಂ.ಜೆ., ಬೆಂಗಳೂರು ಬಾಷ್ ಲಿಮಿಟೆಡ್ನ ನಿವೃತ್ತ ಮಾನವ ಸಂಪನ್ಮೂಲ ವ್ಯವಸ್ಥಾಪಕ ಶೀನಪ್ಪ ಗೌಡ, ಎಪಿಎಂಸಿ ಮಾಜಿ ಸದಸ್ಯ ಮೇದಪ್ಪ ಗೌಡ, ಹರೀಶ್ಚಂದ್ರ ಕಳಿಗೆ, ಶಿವಪ್ರಸಾದ್, ಸುದರ್ಶನ ಗೌಡ, ಸತೀಶ್, ದುಗ್ಗಪ್ಪ ಗೌಡ ಉಪಸ್ಥಿತರಿದ್ದರು.
ಐತ್ತೂರು ವಲಯ ಮೇಲ್ವೀಚಾರಕ ಸೋಮೇಶ್ ಬಿಳಿನೆಲೆ ಐತ್ತೂರು ವಲಯದ ಸಾಧನಾ ವರದಿ ಮಂಡಿಸಿದರು. ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿದರು. ಬಿಳಿನೆಲೆ ಕೈಕಂಬ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಭವ್ಶಶ್ರೀ ವಂದಿಸಿದರು. ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.
ಧರ್ಮಸ್ಥಳ ಯೋಜನೆಯಿಂದ ಮಂಜೂರಾದ ವಿವಿಧ ಸೌಲಭ್ಯಗಳಾದ ಪುತ್ತಿಲ ಬೈಲಡ್ಕ ಶಾಲಾ ಆವರಣ ಗೊಡೆ ನಿರ್ಮಾಣಕ್ಕೆ 25000 ರೂ. ಅನುದಾನ, ಬಂಟ್ರ ಗ್ರಾಮದ ಗಿರೀಶ್ ರೈ ಅವರಿಗೆ 2000 ರೂ. ತಿಂಗಳ ಮಾಸಾಶನ ಮಂಜೂರಾತಿ, ದೈಹಿಕವಾಗಿ ಅಶಕ್ತರಾದ ಲೋಕಯ್ಯ ಗೌಡ ಮಾಲ ಅವರಿಗೆ ಗಾಲಿ ಕುರ್ಚಿ, ಸಂಪೂರ್ಣ ಸುರಕ್ಷಾ ಸೌಲಭ್ಯದಡಿಯಲ್ಲಿ ಕೊಡಿಂಬಾಳ ಭವಾನಿ ಅವರಿಗೆ 37,500 ರೂ. ವಿಮಾ ಮೊತ್ತದ ಮಂಜೂರಾತಿ ಪತ್ರ ವಿತರಣೆ, ವಿವಿಧ ಸ್ಪರ್ದಾ ವಿಜೇತರಿಗೆ ಬಹುಮಾನ ವಿತರಣೆ, ನಿಕಟಪೂರ್ವ ಪಧಾದಿಕಾರಿಗಳ ಸೇವೆಗೆ ಮಂಜೂರಾತಿಯ ಉಡುಗೊರೆ ವಿತರಿಸಲಾಯಿತು.