ಹೃದಯಾಘಾತಕ್ಕಿಡಾಗಿ ಗೃಹಿಣಿ ಸಾವು

ತನ್ನೀರಾ ಸುಲ್ತಾನ ಮೃತರು
Published on: 

ಕಾಸರಗೋಡು: ಊಟ ಮಾಡಿ ಮಲಗಿದ್ದ ಗೃಹಿಣಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಸರಗೋಡು ಹೊಸಬಸ್ ನಿಲ್ದಾಣದಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಮನ್ಸೂರ್ ಎಂಬುವರ ಪತ್ನಿ ತನ್ನಿಯ ಯಾನೆ ತನ್ನೀರಾ ಸುಲ್ತಾನ (29) ಮೃತರು. ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದ ತನ್ನೀರಾ ಸುಲ್ತಾನ ಭಾನುವಾರ ಬೆಳಗ್ಗೆ ಬಹಳ ಹೊತ್ತಿನವರೆಗೂ ಎದ್ದಿರಲಿಲ್ಲ. ಮನೆಯವರು ಎಬ್ಬಿಸಲು ಹೋದಾಗ ಪ್ರಜ್ಞೆ ಇರಲಿಲ್ಲ. ವೈದ್ಯರನ್ನು ಕರೆಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದು ಖಚಿತವಾಗಿದೆ.

ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ

ಕಾಸರಗೋಡು: ಕುಂಬಳೆ ರೈಲು ನಿಲ್ದಾಣ ಬಳಿಯ ನಿರ್ಜನ ಪ್ರದೇಶದಲ್ಲಿ ಕಾರಿನೊಳಗೆ ಪ್ಲಸ್‌ವನ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ದೂರಿನ ಮೇರೆಗೆ 18ರ ಯುವಕ ಅಹ್ಮದ್ ಅಫ್ಸಲ್ ಎಂಬಾತನ ವಿರುದ್ಧ ಕುಂಬಳೆ ಠಾಣೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಯುವಕನ ಪರಿಚಯವಾಗಿದ್ದು ಕಾರಿನಲ್ಲಿ ಕರೆದೊಯ್ದ ಆತ ಕುಂಬಳೆ ರೈಲು ನಿಲ್ದಾಣ ಪರಿಸರದ ನಿರ್ಜನ ಜಾಗದಲ್ಲಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ವೈದ್ಯರಲ್ಲಿ ತೆರಳಿದಾಗ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯರು ವಿಚಾರಿಸಿದಾಗ ವಾಹಿತಿ ಬಹಿರಂಗಗೊಂಡಿದ್ದು, ತಕ್ಷಣ ಕುಂಬಳೆ ಠಾಣೆ ಪೊಲೀಸರಿಗೆ ವಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ವಿದ್ಯಾರ್ಥಿನಿ ಹೇಳಿಕೆ ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತ ಗಾಯಾಳು ಮಹಿಳೆ ಸಾವು

ಕಾಸರಗೋಡು: ಕುಂಬಳೆ ಪೇಟೆಯಲ್ಲಿ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಕುಂಬಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಜ್ಜಿಲಂಗೋಡು ಕಳತ್ತೂರು ನಿವಾಸಿ ಚನಿಯಪ್ಪ ಪೂಜಾರಿ ಎಂಬವರ ಪತ್ನಿ ಲಕ್ಷ್ಮೀ (69) ಮೃತಪಟ್ಟಿದ್ದಾರೆ. ಆಗಸ್ಟ್ 14ರಂದು ಕುಂಬಳೆಯಲ್ಲಿ ಲಕ್ಷ್ಮೀ ಅವರಿಗೆ ಕಾರು ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರು ಆಸ್ಪತ್ರೆಯಲ್ಲಿ ತಜ್ಞ ಚಿಕಿತ್ಸೆ ನಂತರ ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮನೆ ನಿರ್ಮಾಣ ವೇಳೆ ಸಾವು

ಕಾಸರಗೋಡು: ಹೊಸದುರ್ಗದಲ್ಲಿ ಮನೆ ನಿರ್ವಾಣ ಕೆಲಸದಲ್ಲಿ ನಿರತರಾಗಿದ್ದ ವೇಳೆ ಅನಾರೋಗ್ಯ ಕಾಣಿಸಿಕೊಂಡು ಅಂಬಲತ್ತರ ಪಾರಪ್ಪಳ್ಳಿ ನಿವಾಸಿ, ದಿ.ಅಬ್ದುಲ್ ರಹಿವಾನ್-ನಫೀಸಾ ದಂಪತಿ ಪುತ್ರ ಸಜಾರಿಯ (45) ಮೃತಪಟ್ಟಿದ್ದಾರೆ. ಟಿಪ್ಪರ್ ಲಾರಿ ಚಾಲಕನಾಗಿ ದುಡಿಯುತ್ತಿದ್ದರು. ಸ್ವ್ವಂತ ಮನೆ ನಿರ್ವಾಣದ ಕೆಲಸದಲ್ಲಿ ತೊಡಗಿಸಿಕೊಮಡಿದ್ದ ವೇಳೆ ಅಸೌಖ್ಯ ಕಾಣಿಸಿಕೊಂಡಿದ್ದು, ತಕ್ಷಣ ಕಾಞಂಗಾಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.

ಕೋಳಿ ಅಂಕದ ಮೇಲೆ ದಾಳಿ

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾಜೆ ತಲೆಬೈಲು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು, ಮೂರು ಮಂಧಿಯನ್ನು ಬಂಧಿಸಿದ್ದಾರೆ. ಬದಿಯಡ್ಕ ಸನಿಹದ ವಾಡತ್ತಡ್ಕ ನಿವಾಸಿ ಪ್ರಮೋದ್ (43), ವಿದ್ಯಾಗಿರಿ ಕಡಾರಿನ ಜಗದೀಶ ಶೆಟ್ಟಿ (58), ನಾರಂಪಾಡಿ ನೆಲ್ಲಿಯಡ್ಕದ ಸುಕೇಶ್ (28) ಬಂಧಿತರು. ಸ್ಥಳದಿಂದ 6 ಅಂಕದ ಕೋಳಿಗಳು ಮತ್ತು ಜೂಜಿಗೆ ಬಳಸಿದ್ದರೆನ್ನಲಾದ 3,250 ರೂ. ನಗದು ವಶಪಡಿಸಿಕೊಂಡಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಬದಿಯಡ್ಕ ಠಾಣೆ ಪ್ರಿನ್ಸಿಪಾಲ್ ಎಸ್‌ಐ ಸುನಿಲ್ ಕುವಾರ್ ನೇತತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಬಂಧಿತರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net