ನೇಣುಬಿಗಿದು ಗೃಹಿಣಿ ಆತ್ಮಹತ್ಯೆ

ನೀಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲು
ರಮ್ಯಾ
ರಮ್ಯಾ
Published on: 

ಕಾಸರಗೋಡು: ಕಾಞಂಗಾಡ್ ಪಡನ್ನಕ್ಕಾಡ್ ಕರುವಂ ನಿವಾಸಿ ಹಾಗೂ ಪ್ರಸಕ್ತ ನೀಲೇಶ್ವರ ತಟ್ಟಾಚೇರಿಯಲ್ಲಿ ವಾಸಿಸುವ ರಮ್ಯಾ (40) ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೋಯಿಕ್ಕೋಡ್ ಫರೂಕ್ ನಗರಸಭಾ ಕಾರ್ಯದರ್ಶಿ ಶ್ರೀಜಿತ್ ಅವರ ಪತ್ನಿಯಾಗಿರುವ ರಮ್ಯಾ ಕಾಸರಗೋಡು ನಗರಸಭೆಯಲ್ಲಿ ಸೀನಿಯರ್ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಮಕ್ಕಳು ಟ್ಯೂಷನ್‌ಗೆ ತೆರಳಿದ್ದ ಬಳಿಕ ಒಳಗಿಂದ ಬಾಗಿಲು ಹಾಕಿ ಕೃತ್ಯವೆಸಗಿದ್ದು, ಸ್ಥಳೀಯ ನಿವಾಸಿಗಳು ಬಾಗಿಲು ಮುರಿದು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ನೀಲೇಶ್ವರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.