

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಾದಕ ವಸ್ತು ಸೇವನೆ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನಂತೂರು ಬಳಿ ಮಾದಕ ವಸ್ತು ಸೇವಿಸುತ್ತಿದ್ದ ಮೂವರು ಯುವಕರನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೋಳೂರಿನ ರಾಕೇಶ್ (33), ಸುಲ್ತಾನ್ ಬತ್ತೇರಿಯ ಶಾಶ್ವತ್ ಎಸ್. (24) ಮತ್ತು ಮೂಡುಶೆಡ್ಡೆಯ ಆದಿತ್ಯ ಜನಾರ್ದನ ಕೊಟ್ಯಾನ್ (24) ಆರೋಪಿಗಳು. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಸೋಮೇಶ್ವರ ಗ್ರಾಮದ ಕುಂಪಲ ಮೂರುಕಟ್ಟೆ ಬಸ್ಸು ನಿಲುಗಡೆ ಸ್ಥಳದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ವರ್ತಿಸುತ್ತಿದ್ದ ಇಬ್ಬರನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಂಪಲ ಮಯೂರ ಗ್ರೌಂಡ್ ಬಳಿಯ ನಿವಾಸಿ ಕಾರ್ಮೆಲ್ ಕಿರಣ್ ಡಿಸೋಜ (24) ಮತ್ತು ಹನುಮಾನ್ ನಗರ ಪ್ರತೀಕ್ (25) ನಿವಾಸಿ ಆರೋಪಿಗಳು. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.