ಬಿಸಿತುಪ್ಪವಾದ ಬೆಳೆವಿಮೆ ಪರಿಹಾರ! Crop Insurance

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
Published on

ಪ್ರಮುಖ ಮುಖ್ಯಾಂಶಗಳು

  • ಪ್ರೀಮಿಯಂನಷ್ಟೂ ಸಿಗದ ಪರಿಹಾರ
  • ಕಂಗಾಲಾದ ಕೃಷಿಕ
  • ಅಧಿಕಾರಿಗಳ ನಿರುತ್ಸಾಹ

ಪುತ್ತೂರು:ಅತಿಯಾದ ಮಳೆಯಿಂದ ಅಡಕೆ ಬೆಳೆ ನೆಲಕಚ್ಚಿದ್ದು, ಪರಿಹಾರದ ನಿರೀಕ್ಷೆಯಲ್ಲಿರುವ ಕೃಷಿಕರಿಗೆ ವಿಮೆ ಮೊತ್ತ ಬಿಸಿತುಪ್ಪವಾಗಿ ಪರಿಣಮಿಸಿದೆ. ಶೇ.೭೫ಕ್ಕೂ ಅಧಿಕಬೆಳೆಹಾನಿ ಸಂಭವಿಸಿದರೂ ಹವಾಮಾನ ಆಧಾರಿತ ವಿಮೆ ನಿರಾಸೆ ಮೂಡಿಸಿದೆ. ಕಟ್ಟಿದ ಪ್ರೀಮಿಯಂ ಹಣದಷ್ಟೂ ಪರಿಹಾರ ಬಂದಿಲ್ಲ ಎಂಬ ಆರೋಪ ರೈತರಿಂದ ಕೇಳಿಬಂದಿದೆ.

ರಾಜ್ಯದಲ್ಲಿಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಿಮಾ ಕಂಪನಿಗಳು ಪ್ರೀಮಿಯಂ ಸ್ವೀಕಾರಕ್ಕೆ ಹಿಂದೇಟು ಹಾಕಿದ್ದವು. ಸಂದರ್ಭ ಜಿಲ್ಲಾಮಟ್ಟದಲ್ಲಿ ಟರ್ಮ್ಶೀಟ್ನಲ್ಲಿ ಕೆಲವೊಂದು ಬದಲಾವಣೆ ಮಾಡಿ ಕಳೆದ ೧೦ ವರ್ಷದ ಹವಾಮಾನದಬದಲಾವಣೆ ಗಮನಿಸಿ ಪರಿಹಾರ ನೀಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಕಳೆದೆವರ್ಷ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ತೀವ್ರಮಳೆ ಹಾಗೂ ಮಾರ್ಚ್-ಏಪ್ರಿಲ್ನಲ್ಲಿ ಬಿಸಿಲಿನತೀವ್ರತೆ ಹೆಚ್ಟಿತ್ತು. ಮೇ ತಿಂಗಳಲ್ಲಿ ಆರಂಭವಾದಮಳೆ ಸುಮಾರು ಮೂರು ತಿಂಗಳು ಎಡೆಬಿಡದೆ ಸುರಿದಿತ್ತು. ಇದರಿಂದ ಶೇ.೭೫ಕ್ಕೂ ಅಧಿಕಬೆಳೆಹಾನಿಯಾಗಿದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೂ ಪರಿಹಾರ ಮೊತ್ತ ಕಡಿಮೆಯಾಗಿ ಬರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವಿಲ್ಲದಾಗಿದೆ.

ಗ್ರಾಮದಮಾಪನ ಸಮಸ್ಯೆ

ಗ್ರಾಮಗಳಲ್ಲಿರುವಮಳೆ ಮಾಪಕ ಹಾಗೂ ಹವಾಮಾನ ದಾಖಲು ಯಂತ್ರಗಳು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಹವಾಮಾನ ಆಧಾರಿತ ಬೆಳೆ ವಿಮೆ ಕೃಷಿಕರಿಗೆ ಸರಿಯಾಗಿ ಲಭಿಸಿಲ್ಲ. ಇದನ್ನು ತಕ್ಷಣ ದುರಸ್ತಿಗೊಳಿಸುವ ಜತೆಗೆ ಸರಿಯಾಗಿ ನಿರ್ವಹಣೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈಗಾಗಲೇ ಕೃಷಿಕರಿಗೆ ಆಗಿರುವ ನಷ್ಟಕ್ಕೆ ಖಾಸಗಿಯವರಿಂದ ಅಥವಾ ಕೃಷಿಕರಿಂದ ಮಳೆ ಪ್ರಮಾಣ ಪಡೆದುಕೊಂಡು ಅಗತ್ಯ ಪರಿಹಾರ ಒದಗಿಸಬೇಕೆಂಬ ಬೇಡಿಕೆ ಕೇಳಿ ಬರುತ್ತಿದೆ.

ಯಾರಪಾಲು ಎಷ್ಟು?

ಕೃಷಿಕ ಎಕರೆಗೆ ,೫೯೦ ರೂ.ಪಾವತಿಸಿದರೆ ಕೇಂದ್ರ ,೧೮೦ ರೂ.,ರಾಜ್ಯ ೧೦,೩೬೦ ರೂ.ಪಾವತಿ ಮಾಡಿತ್ತು. ವಿಮಾ ಕಂಪನಿಗೆ ಒಟ್ಟು ೧೮,೧೩೦ ರೂ.ಪಾವತಿಯಾಗಿದ್ದು, ಗರಿಷ್ಠ ಪರಿಹಾರ ೫೧,೮೦೧ ರೂ.ಬಿಡುಗಡೆಗೊಳಿಸಬಹುದಾಗಿದ್ದು,ಸದ್ಯ ೧೨,೩೯೮ ರೂ.ಮಾತ್ರ ಬಿಡುಗಡೆಗೊಳಿಸಿದೆ ಎಂಬ ಎಂಬ ಆರೋಪ ಕೇಳಿಬಂದಿದೆ.

ಸಾಲಮನ್ನಾವೂ ಇಲ್ಲ

ಕೃಷಿಹಾನಿಯಿಂದ ಕಂಗೆಟ್ಟಿರುವ ಬೆಳೆಗಾರರು ಸಹಕಾರಿ ಸಂಘದಲ್ಲಿರುವ ಸಾಲಗಳನ್ನು ಮನ್ನಾ ಮಾಡುವಂತೆ ಸಂಘದ ಮಹಾಸಭೆ ಮೂಲಕ ಆಗ್ರಹಿಸಿ ಸರ್ಕಾರಕ್ಕೆ ಮನವಿ ಕಳುಹಿಸುವಂತೆ ಕೇಳಿದ್ದರು. ಸರ್ಕಾರ ಬೆಳೆ ಹಾನಿ ಸಮೀಕ್ಷೆ ನಡೆಸುವುದಾಗಿ ಹೇಳಿಕೊಂಡಿದೆಯಾದರೂ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಕರಾವಳಿ ಭಾಗದ ಜನರ ಸಂಕಷ್ಟದ ಬಗ್ಗೆ ಧ್ವನಿಯೆತ್ತಬೇಕಾದ ಜನಪ್ರತಿನಿಧಿಗಳೂ ಬಗ್ಗೆ ಮೌನವಾಗಿದ್ದಾರೆಎಂದು ಕೃಷಿಕರು ದೂರಿದ್ದಾರೆ.

ಇಲಾಖೆಪರಿಹಾರ ನೀಡುವಂತಿಲ್ಲ

ಕೃಷಿಕರುಬೆಳೆ ಹಾನಿ ವಿಚಾರದಲ್ಲಿ ವಿಮೆ ಮಾಡಿಸಿದಲ್ಲಿ ಬಳಿಕ ಸರ್ಕಾರದಿಂದ ಹೆಚ್ಚುವರಿ ಪರಿಹಾರ ನೀಡಲು ಕಾನೂನು ತೊಡಕಾಗುತ್ತದೆ. ಜಿಲ್ಲೆಯ ಸುಮಾರು ೬೨ ಸಾವಿರ ಹೆಕ್ಟೇರ್ಪ್ರದೇಶಕ್ಕೆ ಪ್ರೀಮಿಯಂ ಪಾವತಿ ಮಾಡಲಾಗಿತ್ತು. ಕಂಪನಿಗಳಿಗೆ ವಿಧಿಸಿದ ನಿಯಮದ ಪ್ರಕಾರ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಹೆಚ್ಚುವರಿ ಪರಿಹಾರ ನೀಡಬಾರದೆಂದು ಹೇಳಲಾಗಿದೆ. ಇದನ್ನು ಗಮನಿಸದೆ ಕೃಷಿಕರು ವಿಮೆ ಮಾಡಿದ್ದು, ಈಗ ಇಲಾಖೆ ಪರಿಹಾರಸಿಗದೆ ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದೆ.

"

ಈ ಸಲ ಪಾವತಿಯಾದ ಬೆಳೆ ವಿಮೆ ಮೊತ್ತ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಾಗ ಅತ್ಯಲ್ಪವಾಗಿದೆ. ಪ್ರಾಕೃತಿಕ ವಿಕೋಪಗಳಿಂದ ಸೋತು ಹೋಗಿರುವ ಕೃಷಿಕರಿಗೆ ಈ ಮೊತ್ತ ಏನೇನೂ ಸಾಲದು. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ವಿಮೆಯ ಹಣ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಕೃಷಿಕರು ಜೀವನ ನಡೆಸಲು ಹೆಣಗಾಡಬೇಕಾಗಬಹುದು. ಕೃಷಿಕರೆಲ್ಲ ಒಗ್ಗಟ್ಟಿನ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.

"

ಸುಳ್ಯ ಹೊರತುಪಡಿಸಿದರೆ ಜಿಲ್ಲೆಯ ಉಳಿದ ಪ್ರದೇಶದಲ್ಲಿ ರೈತರು ಕಟ್ಟಿದ ಹಣದ ದುಪ್ಪಟ್ಟುವರೆಗೆ ಮಾತ್ರ ವಿಮಾ ಪರಿಹಾರ ಬಂದಿದೆ. ಇದು ಅಡಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಮಾಡಿದ ದ್ರೋಹ. ಪರಿಹಾರದ ಮೊತ್ತವನ್ನು ಸರಿಯಾಗಿ ಸೂಚಿಸಿದ ಅಧಿಕಾರಿಯನ್ನು ವರ್ಗಾಯಿಸಿದ್ದರ ಹಿಂದೆ ಯಾವ ವಿಚಾರವಿದೆ? ಬೆಳೆ ಸಂಪೂರ್ಣ ನಾಶವಾದರೂ, ಬೆಳೆ ವಿಮೆ ಇಲ್ಲವಾದರೆ ಇದು ಎಂಥಹ ಸೌಲಭ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿಕೊಂಡು ವಿಮಾ ಕಂಪನಿಯನ್ನು ಬೆಳೆಸುವ ಹುನ್ನಾರ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net