ಸೇತುವೆ ಕಾಮಗಾರಿ ವೇಳೆ ನೀರಿಗೆ ಬಿದ್ದ ಕ್ರೇನ್

ಬೋಟ್ ಜಖಂ, ಇಬ್ಬರು ಕಾರ್ಮಿಕರಿಗೆ ಗಾಯ
ಸ್ಲಾೃಬ್ ಜೋಡಣೆ ವೇಳೆ ಆಯ ತಪ್ಪಿ ನದಿಗೆ ಉರುಳಿ ಬಿದ್ದ ಕ್ರೇನ್.
ಸ್ಲಾೃಬ್ ಜೋಡಣೆ ವೇಳೆ ಆಯ ತಪ್ಪಿ ನದಿಗೆ ಉರುಳಿ ಬಿದ್ದ ಕ್ರೇನ್.
Published on: 

ಮಂಗಳೂರು : ಬೋಳೂರು-ತಣ್ಣೀರುಬಾವಿ ಸೇತುವೆ ನಿರ್ಮಾಣ ಕಾಮಗಾರಿಯ ವೇಳೆ ಶುಕ್ರವಾರ ಕ್ರೇನ್ ನೀರಿಗೆ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.

ಬೆಳಗ್ಗೆ 9.20ರ ಸುಮಾರಿಗೆ ಸೇತುವೆಯ ಸ್ಲ್ಯಾಬ್ ಜೋಡಿಸಲು ಎರಡು ಕ್ರೇನ್‌ಗಳನ್ನು ಬಳಸಲಾಗುತ್ತಿತ್ತು. ಈ ವೇಳೆ ಒಂದು ಕ್ರೇನ್ ನೀರಿಗೆ ಉರುಳಿದೆ. ಸೇತುವೆ ನಿರ್ಮಾಣಕ್ಕಾಗಿ ಪಿಲ್ಲರ್ ಹಾಕಲಾಗಿದೆ. ಅದರ ಮೇಲಿನಿಂದ ಕಾಂಕ್ರೀಟ್ ಸ್ಲಾೃಬ್ ಜೋಡಣೆ ಕಾರ್ಯ ಆಗುತ್ತಿದೆ. ಈ ವೇಳೆ ಆಯ ತಪ್ಪಿ ಸ್ಲಾೃಬ್ ಜಾರಿದ್ದು, ಕ್ರೇನ್ ಸಹಿತ ನದಿ ನೀರಿಗೆ ಬಿದ್ದಿದೆ. ಈ ಸಂದರ್ಭ ಸ್ಲ್ಯಾಬ್ ಬೋಟ್ ಮೇಲೆ ಬಿದ್ದ ಪರಿಣಾಮ ಬೋಟ್ ಮುಳುಗಡೆಯಾಗಿದೆ. ಆದರೆ ಬೋಟ್‌ನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಕ್ರೇನ್ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.