ಕಣಜದ ಹುಳುಗಳ ದಾಳಿಗೆ ಗಬ್ಬದ ಹಸು ಬಲಿ

ರಕ್ಷಿಸಲು ಹೋದ ಮೂವರು ಗಂಭೀರ
wasp
ಕಣಜದ ಹುಳು
Published on: 

ಕಾಸರಗೋಡು: ಕಾಞಂಗಾಡಿನ ಅರಯಿ ಪ್ರದೇಶದಲ್ಲಿ ಕಣಜದ ಹುಳಗಳ ದಾಳಿಗೆ ಗಬ್ಬದ ಹಸುವೊಂದು ಮೃತಪಟ್ಟಿದ್ದು, ಹಸುವನ್ನು ರಕ್ಷಿಸಲು ಹೋದ ಮೂವರು ಗಾಯಗೊಂಡಿದ್ದಾರೆ. ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಸುವಿನ ಮೇಲೆ ಏಕಾಏಕಿ ಕಣಜದ ಹುಳಗಳು ದಾಳಿ ನಡೆಸಿವೆ.

ದಾಳಿಯಿಂದ ಗಂಭೀರ ಗಾಯಗೊಂಡ ಹಸು ಮೃತಪಟ್ಟಿದೆ. ಹಸುವನ್ನು ರಕ್ಷಿಸಲು ಮುಂದಾದ ಅರಯಿಯ ನೌಶಾದ್, ಇಸ್ಮಾಯಿಲ್ ಹಾಗೂ ಕಡವತ್ತಿನ ಕುಟ್ಟನ್‌ಎಂಬುವರ ಮೇಲೂ ಕಣಜದ ಹುಳು ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.