

ಕಾಸರಗೋಡು: ಪಯ್ಯನ್ನೂರು ಕಂಡೋತ್ ನಿವಾಸಿ, ಕಾಸರಗೋಡು ಜಿಪಂ ನೌಕರ ಎಂ.ವಿ.ಅನೂಪ್ (41) ಎಂಬುವರ ಮೃತದೇಹ ಪಡನ್ನಕ್ಕಾಡ್ ಮೂಲುಪಳ್ಳಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ರೈಲು ಡಿಕ್ಕಿಯಾಗಿ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ. ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿಯಂತೆ ಹೊಸದುರ್ಗ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಕಾಸರಗೋಡು ಜಿಪಂ ಎಲ್‌ಎಸ್‌ಜಿಡಿ ಡಿವಿಶನ್‌ನಲ್ಲಿ ಸೀನಿಯರ್ ಕ್ಲಾರ್ಕ್ ಆಗಿದ್ದರು.