

ಕಾಸರಗೋಡು: ಚೆರ್ವತ್ತೂರಿನ ಬಾರ್ ಒಂದರಲ್ಲಿ ಶನಿವಾರ ನಡೆದ ಹೊಡೆದಾಟದಲ್ಲಿ ಚೆರ್ವತ್ತೂರು ತಿಮಿರಿ ಚೆಂಬ್ರಕಾನ ನಿವಾಸಿ ಸಿ.ವಿ.ಮನ್ಸೂರ್‌ಅಲಿ (50) ಎಂಬುವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಚಂದೇರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಸ್‌ಐ ವಿಷ್ಣು ಎಸ್.ನಾಯರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಚೆರ್ವತ್ತೂರು ಪಯ್ಯಂಗಿ ನಿವಾಸಿ ಸುಹೈಲ್(28) ಬಂಧಿತ. ಇದೇ ಪ್ರಕರಣಕ್ಕೆ ಸಂಬಂಧಿಸಿ ಪಯ್ಯಂಗಿ ನಿವಾಸಿ ಜುಲ್ಫಿಕರ್ ಹಾಗೂ ಚೆರ್ವತ್ತೂರು ನಿವಾಸಿ ಅಕ್ಷಯ್ ಎಂಬುವರನ್ನು ಈ ಹಿಂದೆ ಬಂಧಿಸಲಾಗಿದೆ.