ಅಂಗರಗುಡ್ಡೆ ಗುಡ್ಡೆಗೆ ಆಕಸ್ಮಿಕ ಬೆಂಕಿ

ಕಿಲ್ಪಾಡಿ ಅಂಗರಗುಡ್ಡೆ ಬಸ್ ತಂಗುದಾಣದ ಹಿಂದುಗಡೆ ಘಟನೆ
dvg-fire-4.jpg
fire
Published on: 

ಮೂಲ್ಕಿ: ಕಿಲ್ಪಾಡಿ ಅಂಗರಗುಡ್ಡೆ ಬಸ್ ತಂಗುದಾಣದ ಹಿಂದುಗಡೆಯ ಸುಮಾರು 3 ಎಕರೆ ಗುಡ್ಡೆಗೆ ಶುಕ್ರವಾರ ಮಧ್ಯಾಹ್ನ ಏಕಾಏಕಿ ಬೆಂಕಿ ತಗಲಿ ಹೊತ್ತಿ ಉರಿದಿದೆ. ಬೆಂಕಿ ತಗಲಿ ಕೆನ್ನಾಲಿಗೆಯಂತೆ ಇಡೀ ವ್ಯಾಪಿಸುತ್ತಿರುವುದನ್ನು ಕಂಡ ಸ್ಥಳೀಯರಾದ ಸುರೇಶ್ ಶೆಟ್ಟಿ ಕಿನ್ನಿಗೋಳಿ ಪ.ಪಂ. ಸದಸ್ಯ ಗೋಪಾಲಕೃಷ್ಣ ಅವರಿಗೆ ತಿಳಿಸಿದ್ದಾರೆ.

ಹಳೆಯಂಗಡಿ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಲಕ್ಷ್ಮಣ ಸಾಲ್ಯಾನ್ ಪುನರೂರು ಸ್ಥಳೀಯ ಗ್ರಾಮಸ್ಥರ ಜತೆ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಬಳಿಕ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿ ಉರಿದ ಸ್ಥಳದಲ್ಲಿ ವಿದ್ಯುತ್ ತಂತಿ ಹಾದು ಹೋಗುತ್ತಿದ್ದು, ಕೂಡಲೇ ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.