MRPLನಲ್ಲಿ ಭಾರಿ ಸ್ಫೋಟ; ಎಂಟು ಮಂದಿಗೆ ಗಾಯ, ಜೋಕಟ್ಟೆ, ಏರ್ಪೋರ್ಟ್​ ಭಾಗದಲ್ಲಿ ನಡುಗಿದ ಕಟ್ಟಡಗಳು..Mangaluru

 MRPLನಲ್ಲಿ  ಭಾರಿ ಸ್ಫೋಟ; ಎಂಟು ಮಂದಿಗೆ ಗಾಯ, ಜೋಕಟ್ಟೆ, ಏರ್ಪೋರ್ಟ್​ ಭಾಗದಲ್ಲಿ ನಡುಗಿದ ಕಟ್ಟಡಗಳು..Mangaluru
Published on: 
  • MRPL ಪ್ರದೇಶದಲ್ಲಿ ಬುಧವಾರ ಭಾರಿ ಸ್ಪೋಟ, ಎಂಟು ಮಂದಿಗೆ ಗಾಯ

  • ಜೋ ಕಟ್ಟೆಯಲ್ಲಿನ ಮನೆಗಳಲ್ಲಿ ಕಂಪನ, ಬಾಗಿಲು ಕಿಟಕಿಗಳಿಗೆ ಹಾನಿ

  • ತುರ್ತು ಅಗತ್ಯ ಕ್ರಮಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್​ ಚೌಟ ಮನವಿ

ಮಂಗಳೂರು: ಸುರತ್ಕಲ್​​ನಲ್ಲಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಪ್ರದೇಶದಲ್ಲಿ ಬುಧವಾರ ಭಾರಿ ಸ್ಪೋಟ ಸಂಭವಿಸಿದ್ದು, ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಪ್ರದೇಶದಲ್ಲಿ ಸ್ಫೋಟಗೊಂಡು, ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಜೋ ಕಟ್ಟೆ ಪಂಚಾಯತ್​ ಕಟ್ಟಡ, ಬಾಪ್ಜೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿನಾಮ ನಿಲ್ದಾಣದ ಆಡಳಿತ ಕಚೇರಿ ಸೇರಿದಂತೆ ಸುತ್ತಮುತ್ತಲಿನ ಮನೆಗಳು ಕಂಪಿಸಿವೆ.

ಪೊಲೀಸರು ಭೇಟಿ

ಹೈಡ್ರೋ ಸಲ್ಫರ್​ ಟ್ರೀಟ್​​ ಮೆಂಟ್​​​ ಸಿಎಚ್​ಟಿ ಘಟಕದಲ್ಲಿ ಭಾರಿ ಸ್ಪೋಟ ಸಂಭವಿಸಿದ ನಂತರ ಕೆಲ ಕಾಲ ದಟ್ಟ ಹೊಗೆ ಕಾಣಿಸಿಕೊಂಡಿದೆ. ಸ್ಫೋಟದ ತೀವ್ರತೆಗೆ ಜೋ ಕಟ್ಟೆ ಪಂಚಾಯತ್​ ವಿಭಾಗದಲ್ಲಿರುವ ಮನೆಗಳ ಕಿಟಕಿ ಬಾಗಿಲುಗಳು ಹಾನಿಗೆ ಒಳಗಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್​ ಆಯುಕ್ತ ಹಾಗೂ ಉಪ ಆಯುಕ್ತರು ಜೊತೆಗೆ ಜಿಲ್ಲಾ ಪಂಚಾಯತ್​ ಸಿಇಒ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ.

8 ಮಂದಿಗೆ ಗಾಯ, ಪ್ರಾಣಾಪಾಯದಿಂದ ಪಾರು

ಘಟನಾ ಸ್ಥಳದಲ್ಲಿದ್ದ ಎಂಟು ಜನರಿಗೆ ಕಾಯವಾಗಿದೆ. ಅದರಲ್ಲಿ ರಾಜೇಶ್​ ಬ್ಯಾಪಿಸ್ಟ್​ ಎಂಬುವವರಿಗೆ ಶೇ.35ರಷ್ಟು ಸುಟ್ಟಗಾಯವಾಗಿದ್ದು, ಅವರನ್ನು ಶ್ರೀನಿವಾಸ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಇರಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಸಂಸದರು ಹೀಗಂದ್ರು

ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಎಕ್ಸ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಎಂಆರ್​ಪಿಎಲ್​ ನಲ್ಲಿ ಸ್ಪೋಟ ಸಂಭವಿಸಿದ ನಂತರ ನಾನು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿದ್ದಾರೆ. ಮಾಹಿತಿ ಪಡೆದುಕೊಂಡಿದ್ದೇನೆ. ಘಟನೆ ನಡೆದ ಸಂದರ್ಭಧಲ್ಲಿ ಎಂಆರ್‌ಪಿಎಲ್ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಬಜ್ಪೆ ಪಟ್ಟಣ ಪಂಚಾಯತ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ ಎಂದು ಬರೆದುಕೊಂಡಿದ್ದಾರೆ.

ಪರಿಸ್ಥಿತಿಯನ್ನು ತಹಬದಿಗೆ ತರಲು ಯತ್ನಿಸಲಾಗುತ್ತಿದೆ. ಸ್ಥಳದಲ್ಲಿ ಶೀಘ್ರವಾಗಿ ಸುರಕ್ಷಿತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯೆ ವ್ಯವಸ್ಥೆ ಮಾಡಿಕೊಳ್ಳಲು ಸ್ಥಳೀಯ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಜನರು ಶಾಂತ ರೀತಿಯಲ್ಲಿ ವರ್ತಿಸಬೇಕು. ಸ್ಫೋಟ ನಡೆದ ಘಟನೆ ಬಗ್ಗೆ ಯಾವುದೇ ರೀತಿಯಲ್ಲಿ ವದಂತಿ ಹಬ್ಬಿಸದಿರಲು ಮನವಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸ್ಥಳೀಯರ ರಿಯಾಕ್ಷನ್ ಹೇಗಿದೆ?

MRPL ಘಟಕ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿದೆ. ಮಧ್ಯಾಹ್ನ ಸುಮಾರು 12:30ಕ್ಕೆ ದೊಡ್ಡ ಶಬ್ಧ ಕೇಳಿಸಿತು. ಸ್ಫೋಟದ ಶಬ್ದವು ತುಂಬಾ ಜೋರಾಗಿತ್ತು. ನಮ್ಮ ಮನೆಯ ಕಿಟಕಿಗಳು ಮತ್ತು ಗೋಡೆಗಳು ಹಾನಿಗೊಳಗಾದವು. ಜೊತೆಗೆ ಇಲ್ಲಿ ಹಲವರ ಮನೆಯ ಗಾಜುಗಳು ಸಹ ಮುರಿದುಹೋಗಿವೆ ಎಮದು ಮಂಗಳೂರು ನಿವಾಸಿ ಮುಖೇಶ್ ಹೇಳಿಕೊಂಡಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net