ಉಜಿರೆಯಲ್ಲಿ 580 ಕೆ.ಜಿ. ತೂಕದ ಮೀನು

ನೋಡಲು, ಖರೀದಿಸಲು ಮುಗಿಬಿದ್ದ ಜನ
 ಕ್ರೇನ್ ಮೂಲಕ ಮೀನನ್ನು ಇಳಿಸುತ್ತಿರುವುದು.
ಕ್ರೇನ್ ಮೂಲಕ ಮೀನನ್ನು ಇಳಿಸುತ್ತಿರುವುದು.
Published on: 

ಬೆಳ್ತಂಗಡಿ: ಉಜಿರೆ ನಾಗೇಶ್ ಕೋಟ್ಯಾನ್ ಮಾಲೀಕತ್ವದ ಕೋಟಿ-ಚೆನ್ನಯ ಮೀನಿನ ಅಂಗಡಿಗೆ ಶುಕ್ರವಾರ 580 ಕೆ.ಜಿ. ತೂಕದ ಬೃಹತ್ ಪಾಲೆ ಮೀನು ಬಂದಿದ್ದು ಇದನ್ನು ನೋಡಲು, ಖರೀದಿಸಲು ಜನ ಮುಗಿಬಿದ್ದರು. ಅತ್ಯಂತ ರುಚಿಕರ ಮತ್ತು ಮುಳ್ಳುರಹಿತ ಮೀನಾಗಿದ್ದು ಮಲ್ಪೆ ಬಂದರಿನಿಂದ ತರಲಾಗಿತ್ತು.

ಕ್ರೈನ್ ಮೂಲಕ ಇದನ್ನು ಇಳಿಸಲಾಯಿತು. ಉಜಿರೆಗೆ ಇಂಥ ಮೀನು ನಾಲ್ಕನೇ ಸಲ ಬಂದಿದ್ದು, ಬಹುಬೇಡಿಕೆ ಇದೆ. ಕೆ.ಜಿ.ಗೆ 350 ರೂ.ನಂತೆ ಮಾರಾಟವಾಗಿದೆ ಎಂದು ಮಾಲೀಕ ನಾಗೇಶ್ ಕೋಟ್ಯಾನ್ ವಿಜಯವಾಣಿಗೆ ತಿಳಿಸಿದ್ದಾರೆ.