ಜ್ವಲಂತ ಸಮಸ್ಯೆ ಮರೆತಿರುವ ಬಿಜೆಪಿ ಶಾಸಕರು : ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಟೀಕೆ

sabhe
Published on

ಗುರುಪುರ: ಜಿಲ್ಲೆಯ ಬಿಜೆಪಿ ಶಾಸಕರು ತುಳುನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗ, ಸರ್ಕಾರಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ವಸತಿ ಯೋಜನೆಯಂತಹ ಪ್ರಮುಖ ಬೇಡಿಕೆಗಳು ಪಟ್ಟಿಯಿಂದ ಕಾಣೆಯಾದಂತಿವೆ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.

ಸಿಪಿಐಎಂ ಗುರುಪುರ ವಲಯ ಸಮ್ಮೇಳನ ಪ್ರಯುಕ್ತ ಭಾನುವಾರ ಕುಪ್ಪೆಪದವಿನಲ್ಲಿ ಆಯೋಜಿಸಲಾದ ಬಹಿರಂಗ ಸಭೆಯಲ್ಲಿ ವಾತನಾಡಿದರು.

ಕಾಂಗ್ರೆಸ್ ಆಡಳಿತದಲ್ಲಿ ಅನೇಕ ವೈಫಲ್ಯ ಕಂಡುಬರುತ್ತಿದ್ದು, ನಾಯಕರಲ್ಲಿ ಬಿಜೆಪಿ ಯಾರು, ಕಾಂಗ್ರೆಸ್ ಯಾರು ಎಂದು ಗುರುತಿಸುವುದು ಕಷ್ಟವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಗಾಗ ಅನೈತಿಕ ಮೈತ್ರಿ ನಡೆಯುತ್ತಿದೆ. ಕಾಂಗ್ರೆಸ್ ಎಚ್ಚೆತ್ತುಕೊಂಡು ತನ್ನ ನಡೆ ತಿದ್ದಿಕೊಳ್ಳದಿದ್ದರೆ, ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಭೆಗೆ ಮುನ್ನ ನಾರಾಯಣ ಗುರು ಸಮುದಾಯ ಮಂದಿರದಿಂದ ಕುಪ್ಪೆಪದವು ಪೇಟೆಯವರೆಗೆ ಸಿಪಿಐಎಂ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ರಾಜೇಶ್ ನಾಯ್ಕ ಇರುವೈಲು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ.ಕೃಷ್ಣಪ್ಪ ಕೊಂಚಾಡಿ, ವಲಯ ಕಾರ್ಯದರ್ಶಿ ಸದಾಶಿವ ದಾಸ್ ವಾತನಾಡಿದರು. ವಸಂತಿ ಕುಪ್ಪೆಪದವು, ಎನ್.ಎ.ಹಸನಬ್ಬ ಉಪಸ್ಥಿತರಿದ್ದರು. ಮನೋಜ್ ವಾಮಂಜೂರು ಸ್ವಾಗತಿಸಿದರು. ನೋಣಯ್ಯ ಗೌಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net