ಎಳೆಯಪ್ರಾಯದಲ್ಲಿ ನಾಗರಿಕ ಹಕ್ಕು, ಕಾನೂನಿನ ಅರಿವು : ನಾಟಕ ಪ್ರದರ್ಶನದಲ್ಲಿ ಗಿರೀಶ್ ನಾವಡ ಹೇಳಿಕೆ

New Project (54)
Published on

ಮೂಲ್ಕಿ: ನಾಗರಿಕ ಹಕ್ಕು, ಬಾಧ್ಯತೆಗಳು ಮತ್ತು ಕಾನೂನಿನ ಅರಿವು ಎಳೆಯಪ್ರಾಯದಲ್ಲಿ ಲಭಿಸಿದಲ್ಲಿ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಗಿರೀಶ್ ನಾವಡ ಹೇಳಿದರು.

ಮೂಲ್ಕಿ ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ನಾಗರಿಕ ಹಕ್ಕು ಸಂರಕ್ಷಣಾ ನಾಟಕ ಪ್ರದರ್ಶನದಲ್ಲಿ ಮಾಹಿತಿ ನೀಡಿದರು.

ರಂಗಕರ್ಮಿಗಳಾದ ಗಿರೀಶ್ ಶೆಟ್ಟಿ, ಮನೋಜ್ ಶೆಟ್ಟಿ, ನಿಖಿಲ್ ಮತ್ತು ಗಿರೀಶ್ ನಾವಡ ಕಲಾತ್ಮಕವಾಗಿ ಪ್ರದರ್ಶಿಸಲಾದ ನಾಟಕದ ಮೂಲಕ ಮಾನವ ಹಕ್ಕುಗಳು, ಅಸ್ಪಶ್ಯತೆ ನಿರ್ಮೂಲನೆ, ದೌರ್ಜನ್ಯ ನಿರೋಧನೆ, ಪರಿಸರ ಜಾಗೃತಿ ಹಾಗೂ ಸಾಮಾಜಿಕ ಜವಾಬ್ದಾರಿಯ ವಿಷಯಗಳಲ್ಲಿ ಸಂದೇಶ ನೀಡಿದರು.

ಪ್ರಾಂಶುಪಾಲ ಯತೀಶ್ ಅಮೀನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net