ಪ್ರಾಯೋಗಿಕ ಜ್ಞಾನ, ಕೌಶಲಗಳ ಕಲಿಕೆಗೆ ಒತ್ತು ಕೊಡಿ

ಸೈಬರ್ ಭದ್ರತೆ ಕುರಿತ ಕಾರ್ಯಾಗಾರ
ಎಸ್‌ಜೆಎಂಐಟಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ.ಬಿ.ಜಿ. ಕುಮಾರಸ್ವಾಮಿ, ಪ್ರವೀಣ್ ಎಸ್. ಗಟ್ಟಿ, ಡಾ.ಟಿ.ವಿ. ಅರವಿಂದ ಇತರರು ಇದ್ದರು.
ಎಸ್‌ಜೆಎಂಐಟಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಾ.ಬಿ.ಜಿ. ಕುಮಾರಸ್ವಾಮಿ, ಪ್ರವೀಣ್ ಎಸ್. ಗಟ್ಟಿ, ಡಾ.ಟಿ.ವಿ. ಅರವಿಂದ ಇತರರು ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ಇವತ್ತಿನ ಸ್ಪರ್ಧಾತ್ಮಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗದೆ, ಪ್ರಾಯೋಗಿಕ ಜ್ಞಾನ ಮತ್ತು ತಾಂತ್ರಿಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಬಿ.ಜಿ.ಕುಮಾರಸ್ವಾಮಿ ಹೇಳಿದರು.

ಐಸಿಟಿ ಅಕಾಡೆಮಿ, ರೆಡಿಂಗ್ಟನ್ -Ëಂಡೆಷನ್ ಮತ್ತು ಸಿಸ್ಕೋ ಸಹಯೋಗದೊಂದಿಗೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸೆಂಟರ್ ಆ-ï ಎಕ್ಸಲೆನ್ಸ್ ಲ್ಯಾಬ್ ಮತ್ತು ವಿದ್ಯಾರ್ಥಿಗಳಿಗೆ ಸೈಬರ್ ಭದ್ರತೆ ಕುರಿತ ಉಚಿತ ೨೧ ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಗಾರ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳ ಕುರಿತು ಪ್ರಾಯೋಗಿಕ ಅನುಭವ ಪಡೆಯಲು ಉತ್ತಮ ವೇದಿ ಕೆಯಾಗಿದೆ ಎಂದು ತಿಳಿಸಿದರು.

ಐಸಿಟಿ ಅಕಾಡೆಮಿ ಯೋಜನಾ ಹಿರಿಯ ವ್ಯವಸ್ಥಾಪಕ ಪ್ರವೀಣ್ ಎಸ್.ಗಟ್ಟಿ ಅವರು ಮಾತನಾಡಿ, ವಿದ್ಯಾಭ್ಯಾಸದ ಅವಽಯಲ್ಲಿ ಶಿಕ್ಷಕರು, ಶಿಕ್ಷಣ ಸಂಸ್ಥೆ ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬೆಳೆಯುತ್ತಾರೆ. ಆದರೆ, ಕೋರ್ಸ್ ಮುಗಿದ ನಂತರ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವತಂತ್ರ ವ್ಯಕ್ತಿಗಳಾಗುತ್ತಾರೆ. ವೃತ್ತಿ ಆಯ್ಕೆ ಮತ್ತು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದು ಅವರ ಪ್ರಮುಖ ಆದ್ಯತೆಯಾಗುತ್ತದೆ. ಈ ಹಂತದಲ್ಲಿ ಶಿಕ್ಷಣ ಸಂಸ್ಥೆಯೊಂದಿಗಿನ ಅವರ ನೇರ ಸಂಪರ್ಕವೂ ಕಡಿಮೆಯಾಗಬಹುದು. ಆದ್ದರಿಂದ ವಿದ್ಯಾರ್ಥಿಗಳು ಕಾಲೇಜಿನಲ್ಲಿರುವಾಗಲೇ ಉದ್ಯೋಗ ಜಗತ್ತಿಗೆ ಅಗತ್ಯ ಕೌಶಲಗಳನ್ನು ಪಡೆದುಕೊಳ್ಳುವುದು ಬಹಳ ಮುಖ್ಯ ಎಂದರು.

ಶೈಕ್ಷಣಿಕ ಜ್ಞಾನ ಮತ್ತು ಕೈಗಾರಿಕಾ ಅಗತ್ಯಗಳ ನಡುವೆ ಇರುವ ಅಂತರ ಕಡಿಮೆ ಮಾಡುವ ಸೇತುವೆಯಾಗಿ ತಾಂತ್ರಿಕ ಕೌಶಲ ಮತ್ತು ತರಬೇತಿಯನ್ನು ಕಾರ್ಯಾಗಾರದಲ್ಲಿ ನೀಡಲಾಗುತ್ತದೆ. ನಾಲ್ಕು ವರ್ಷಗಳ ಪದವಿ ಶಿಕ್ಷಣವು ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಕಷ್ಟು ಸಮಯ ಒದಗಿಸುತ್ತದೆ.

ಈ ಅವಽಯನ್ನು ಕೇವಲ ಪರೀಕ್ಷೆ ಮತ್ತು ಪದವಿ ಪಡೆಯುವುದಕ್ಕೆ ಸೀಮಿತಗೊಳಿಸದೆ, ತಮ್ಮ ವÊತ್ತಿಜೀವನದ ಸಿದ್ಧತೆಗೆ ಬಳಸಿಕೊಳ್ಳಬೇಕು. ಇಂದಿನ ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದೆ. ಇವತ್ತಿನ ಕೌಶಲಗಳು ನಾಳೆ ಬದಲಾಗುವ ಸಾಧ್ಯತೆಯಿದೆ. ಹೀಗಾಗಿ ವಿದ್ಯಾರ್ಥಿಗಳು ಒಂದೇ ಬಾರಿ ಕೌಶಲ ಕಲಿತು ಅಲ್ಲೇ ನಿಲ್ಲದೆ, ನಿತ್ಯವೂ ಹೊಸದನ್ನು ಕಲಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಇಂಥ ಕಾರ್ಯಾಗಾರಗಳೂ ಹೆಚ್ಚು ಸಹಕಾರಿಯಾಗುತ್ತವೆ ಎಂದರು.

ಕಾಲೇಜಿನ ಎಐ ವಿಭಾಗದ ಮುಖ್ಯಸ್ಥ ಡಾ.ಟಿ.ವಿ.ಅರವಿಂದ ಅವರು ಮಾತನಾಡಿ, ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು, ಸಂಬಂಽತ ತಾಂತ್ರಿಕ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್. ಕೃಷ್ಣರೆಡ್ಡಿ ಮತ್ತು ಐಸಿಟಿ ಅಕಾಡೆಮಿ ಹಿರಿಯ ವ್ಯವಸ್ಥಾಪಕ ಜಕಾಉಲ್ಲಾ, ತರಬೇತುದಾರ ವಿಶ್ವನಾಥ್ ಇತರರು ಇದ್ದರು.

ಚಿನ್ಮಯಿ, ಐಶ್ವರ್ಯಾ ಪ್ರಾರ್ಥಿಸಿದರು. ಪ್ರವಳಿಕಾ ಸ್ವಾಗತಿಸಿ, ಮಿನಾಲ್ ವಂದಿಸಿದರು. -Áರಹ ಅಂಜುಂ ನಿರೂಪಿಸಿದರು. ಅನುಷಾ ಪರಿಚಯ ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net