ಬಂಟ್ವಾಳ: ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ವತಿಯಿಂದ ಮಕ್ಕಳ 18ನೇ ಸಾಹಿತ್ಯ ಸಮ್ಮೇಳನ ಶಂಭೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್‌ನಲ್ಲಿ ಜರುಗಿಸಲಾಗುವುದು ಎಂದು ಶಂಭೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹೇಮಚಂದ್ರ ಭಂಡಾರದ ಮನೆ ತಿಳಿಸಿದರು.
ಸಮ್ಮೇಳನ ಜರುಗಿಸುವ ನಿರ್ಣಯ ಶಾಲಾ ಎಸ್‌ಡಿಎಂಸಿ. ಸಭೆ ಸರ್ವಾನುಮತದಿಂದ ಅಂಗೀಕರಿಸಿದ್ದು, ಗ್ರಾಮದ ಸರ್ವರನ್ನೂ ವಿಶ್ವಾಸಕ್ಕೆ ಪಡೆದು ಸಮ್ಮೇಳನ ಸಂಘಟಿಸಲಾಗುವುದು ಎಂದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ವಿಮಲ ಮತ್ತು ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಅಡೆಪ್ಪಿಲ, ಎಸ್‌ಡಿಎಂಸಿಯ ಸದಸ್ಯರು, ಮುಖ್ಯಶಿಕ್ಷಕ ಜಯರಾಮ ಡಿ.ಸಭೆಯಲ್ಲಿ ಭಾಗವಹಿಸಿದ್ದರು. ಮಕ್ಕಳ ಕಲಾ ಲೋಕದ ಅಧ್ಯಕ್ಷ ರಮೇಶ ಎಂ.ಬಾಯಾರು, ಸೆಪ್ಟೆಂಬರ್ ತಿಂಗಳಲ್ಲಿಯೇ ಸ್ವಾಗತ ಸಮಿತಿ ರಚಿಸಲಾಗುವುದು, ಸಿದ್ಧತೆಗಳ ಬಗ್ಗೆ ಪೂರ್ವಭಾವಿ ಸಭೆ ಜರುಗಿಸಲಾಗುವುದು, ಬಂಟ್ವಾಳ ತಾಲೂಕಿನ ವಿವಿಧ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಲಿರುವರು ಎಂದರು.