

ಸುಳ್ಯ: ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲರ ಐದು ಸಾಹಿತ್ಯ ಕೃತಿಗಳು ನವೆಂಬರ್ ತಿಂಗಳಲ್ಲಿ ಪ್ರಕಟವಾಗಲಿವೆ. ಶಿಶಿಲರ ಪ್ರಥಮ ಕೃತಿ ಬಡ್ಡಡ್ಕ ಅಪ್ಪಯ್ಯ ಗೌಡರ ಬೇಟೆಯ ಅನುಭವಗಳ ಶಿಕಾರಿಯ ಸೀಳು ನೋಟ ಇದರ ನಾಲ್ಕನೇ ಆವೃತ್ತಿಯನ್ನು ಬಡ್ಡಡ್ಕದ ಅನಂತವೇದ ಪ್ರಕಾಶನ ಹೊರತರುತ್ತಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಆತ್ಮಕತೆ ಬೊಗಸೆ ತುಂಬಾ ಕನಸಿನ ಎರಡನೇ ಆವೃತ್ತಿಯನ್ನು ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಿಸುತ್ತಿದೆ. ಇದೇ ಸಂಸ್ಥೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಸಂಪಾದಿಸಿದ ಶಿಶಿಲರ ಹದಿನೆಂಟು ವಿಶಿಷ್ಟ ಕತೆಗಳ ಸಂಕಲನ ಹೊರತರುತ್ತಿದೆ. ನೂತನ ಹತ್ತು ಕತೆಗಳ ಸಂಕಲನ ಕಲ್ಲುರ್ಟಿಯ ಕುಕ್ಕುಟ ಕಥನ ಮತ್ತು ಮಹಾಭಾರತ ಆಧಾರಿತ ಕಾದಂಬರಿ ಕುಂತಿಯನ್ನು ಮೈಸೂರಿನ ರಾಜ್ ಪ್ರಕಾಶನ ಹೊರತರುತ್ತಿದೆ.