ಪೌರ ಕಾರ್ಮಿಕರು ಜನರ ಆರೋಗ್ಯ ರಕ್ಷಕರು Civic workers

ಪೌರ ಕಾರ್ಮಿಕರ ದಿನಾಚರಣೆ
ಬೀರೂರಿನಲ್ಲಿ ಪೌರ ಕಾರ್ಮಿಕರಿಗೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಗುಂಪು ವಿಮೆ ಬಾಂಡ್ ವಿತರಿಸಿದರು. ಜಯಮ್ಮ, ನೂರುದ್ದೀನ್, ಲಕ್ಷ್ಮಣ ಇತರರಿದ್ದರು.
ಬೀರೂರಿನಲ್ಲಿ ಪೌರ ಕಾರ್ಮಿಕರಿಗೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಗುಂಪು ವಿಮೆ ಬಾಂಡ್ ವಿತರಿಸಿದರು. ಜಯಮ್ಮ, ನೂರುದ್ದೀನ್, ಲಕ್ಷ್ಮಣ ಇತರರಿದ್ದರು.
Published on

ಬೀರೂರು: ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಮಾದರಿ ಎಂದು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.

ಬುಧವಾರ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿದಿನ ಬೀದಿ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರಕಾರ್ಮಿಕರು ನಾಗರಿಕರ ಆರೋಗ್ಯ ಕಾಪಾಡುವ ಪ್ರಾಥಮಿಕ ವೈದ್ಯರು. ಸರ್ಕಾರ ಅವರಿಗಾಗಿ ಆರೋಗ್ಯ ತಪಾಸಣೆ, ಸುರಕ್ಷಾ ಪರಿಕರಗಳು, ಗುಂಪು ವಿಮೆ ಸೌಲಭ್ಯ ಜಾರಿಗೊಳಿಸಿದೆ ಎಂದರು.

ಸರ್ಕಾರ ಪೌರ ಕಾರ್ಮಿಕರ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಲು ಯೋಜನೆ ರೂಪಿಸಿದೆ. ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡಲಿದೆ. ಬೆಂಗಳೂರಿನಲ್ಲಿ ಸರ್ಕಾರದಿಂದ ಪೌರ ಕಾರ್ಮಿಕರ ದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರು.

ಪೌರ ಕಾರ್ಮಿಕರ ಸಂಘದ ಅಧ್ಯಕ್ಷೆ ಜಯಮ್ಮ ಮಾತನಾಡಿ, ಪೌರಕಾರ್ಮಿಕರನ್ನು ಗೌರವಿಸುವುದರ ಜತೆಗೆ ಅವರ ಸುರಕ್ಷೆ ಮತ್ತು ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಒತ್ತಾಯಿಸಿದರು.

ಮಿತ್ರಸಮಾಜ ಗಣಪತಿ ಸಮಿತಿ ಅಧ್ಯಕ್ಷ ಸಂತೋಷ್ ಮಾತನಾಡಿ, ಜನರು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡಬೇಕು. ಸಾರ್ವಜನಿಕರು ಸಹಕರಿಸಿದರೆ ಸ್ವಚ್ಛ ನಗರ ನಿರ್ಮಾಣ ಕಾರ್ಯ ಮತ್ತಷ್ಟು ಸುಲಭವಾಗಲಿದೆ ಎಂದರು.

ಪರಿಸರ ಅಭಿಯಂತ ನೂರುದ್ದೀನ್, ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮಣ, ಪೌರ ಕಾರ್ಮಿಕರಾದ ಬಾಬು, ಕುಪ್ಪಮ್ಮ, ಆಶ್ರಯ ಸಮಿತಿ ಸದಸ್ಯ ಮೈಲಾರಪ್ಪ, ಪುರಸಭೆ ಸಿಬ್ಬಂದಿ ಶಿಲ್ಪಾ, ಸ್ವರೂಪಾ, ರೇಣುಕಮ್ಮ, ಗಿರಿರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net