ನವರಾತ್ರಿ ಆಚರಣೆಗೆ ಸಹಕರಿಸಿ Navaratri celebrations

ಶೃಂಗೇರಿ ಶ್ರೀ ಶಾರದಾ ಮಠದಲ್ಲಿ ಶರನ್ನವರಾತ್ರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಮಾತನಾಡಿದರು. ಎ.ಎಸ್.ನಯನ, ಉಮೇಶ್ ಪೊದುವಾಳ್, ಸುಮಂಗಲಿ ಆನಂದಸ್ವಾಮಿ ಇತರರಿದ್ದರು.
ಶೃಂಗೇರಿ ಶ್ರೀ ಶಾರದಾ ಮಠದಲ್ಲಿ ಶರನ್ನವರಾತ್ರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಮಾತನಾಡಿದರು. ಎ.ಎಸ್.ನಯನ, ಉಮೇಶ್ ಪೊದುವಾಳ್, ಸುಮಂಗಲಿ ಆನಂದಸ್ವಾಮಿ ಇತರರಿದ್ದರು.
Published on: 

ಶೃಂಗೇರಿ: ಪ್ರತಿ ವರ್ಷದಂತೆ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ಭಕ್ತಾದಿಗಳು ಸಹಕರಿಸಬೇಕು ಎಂದು ಮಠದ ಆಡಳಿತಾಧಿಕಾರಿ ಪಿ.ಎ.ಮುರಳಿ ಹೇಳಿದರು.

ಶರನ್ನವರಾತ್ರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನವರಾತ್ರಿ ಉತ್ಸವದಲ್ಲಿ ಪ್ರತಿ ದಿನವೂ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ ಬೀದಿ ಉತ್ಸವ ನಡೆಯಲಿದ್ದು, ನವಮಿ ದಿನದಂದು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಬನ್ನಿ ಉತ್ಸವ ನಡೆಯಲಿದೆ. ರಥೋತ್ಸವ ಮತ್ತು ಬೀದಿ ಉತ್ಸವದಲ್ಲಿ ಪಾಲ್ಗೊಳ್ಳುವ ಸ್ತಬ್ಧ ಚಿತ್ರಗಳು ನಮ್ಮ ಪರಂಪರೆ ಬಿಂಬಿಸುವಂತಿದ್ದು, ಆಕರ್ಷಕವಾಗಿರಬೇಕು ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಪಟ್ಟಣದ ರಸ್ತೆ ಅಗಲೀಕರಣದ ಉದ್ದೇಶ ಹೊಂದಲಾಗಿದ್ದು, ಉತ್ಸವದ ಅಂಗವಾಗಿ ತಾತ್ಕಾಲಿಕವಾಗಿ ಮುಖ್ಯ ರಸ್ತೆಯ ಗುಂಡಿ ಮುಚ್ಚಲಾಗುತ್ತದೆ. ಪಟ್ಟಣದಲ್ಲಿ ವಾಹನ ನಿಲುಗಡೆ ಮತ್ತು ಪ್ರವಾಸಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮತ್ತು ಗೃಹರಕ್ಷಕ ದಳ ಸಿಬ್ಬಂದಿ ನಿರ್ವಹಿಸಲಿದ್ದಾರೆ. ಬೀದಿ ದೀಪವನ್ನು ಸಮರ್ಪಕವಾಗಿ ಇಡುವಂತೆ ಮೆಸ್ಕಾಂಗೆ ಸೂಚನೆ ನೀಡಲಾಗುವುದು ಎಂದರು.

ಪಟ್ಟಣದ ಟ್ರಾಫಿಕ್ ವ್ಯವಸ್ಥೆ, ಗಾಂಧಿ ಮೈದಾನದಿಂದ ಮುಖ್ಯ ರಸ್ತೆಗೆ ಬರುವ ರಸ್ತೆಯಲ್ಲಿರುವ ಗೂಡಂಗಡಿ ತೆರವು ಮಾಡುವುದು ಸೇರಿದಂತೆ ವಿವಿಧ ವಿಷಯ ಸಾರ್ವಜನಿಕರು ವ್ಯಕ್ತಪಡಿಸಿದರು.

ಮಠದ ಅಧಿಕಾರಿಗಳಾದ ಶಿವಶಂಕರ ಭಟ್, ಕೃಷ್ಣ ಭಟ್, ಶ್ರೀಕಾಂತ್, ಸತೀಶ್ ಭಟ್, ಪಪಂ ಮುಖ್ಯಾಧಿಕಾರಿ ಸರಸ್ವತಿ ಎಸ್.ಸುಂದರಿ, ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಶೆಟ್ಟಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಎಲ್.ರವಿಕುಮಾರ್, ಪಪಂ ಮಾಜಿ ಅಧ್ಯಕ್ಷ ಟಿ.ಕೆ.ಪರಾಶರ, ವಕೀಲ ಜಿ.ಎಂ.ಸತೀಶ್, ತಾಲೂಕು ಕಸಾಪ ಮಾಜಿ ಉಪಾಧ್ಯಕ್ಷೆ ಪುಷ್ಪಾಲಕ್ಷ್ಮೀನಾರಾಯಣ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net