ಧರ್ಮವನ್ನು ನಾಶ ಮಾಡಲು ಹೊರಟವರಿಗೆ ಶಿಕ್ಷೆ who set out to destroy the nation

ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಲೇಖಕ ಡಾ. ರಾಹುಲ್ ದೇವರಾಜ್ ಅವರಿಗೆ ‘ಶ್ರೀದುರ್ಗಾ ಆಧುನಿಕ ನೀತಿ ಕಥೆಗಳ ರೂವಾರಿ’ ಪುರಸ್ಕಾರ ನೀಡಲಾಯಿತು. ಶ್ರೀ ಪ್ರಣವಾನಂದ ಸ್ವಾಮೀಜಿ, ಎಚ್.ಡಿ.ನಾಗೇಶ್ ಹೆಗ್ಡೆ, ಬಿ.ಚನ್ನಕೇಶವಗೌಡ ಇತರರಿದ್ದರು.
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಲೇಖಕ ಡಾ. ರಾಹುಲ್ ದೇವರಾಜ್ ಅವರಿಗೆ ‘ಶ್ರೀದುರ್ಗಾ ಆಧುನಿಕ ನೀತಿ ಕಥೆಗಳ ರೂವಾರಿ’ ಪುರಸ್ಕಾರ ನೀಡಲಾಯಿತು. ಶ್ರೀ ಪ್ರಣವಾನಂದ ಸ್ವಾಮೀಜಿ, ಎಚ್.ಡಿ.ನಾಗೇಶ್ ಹೆಗ್ಡೆ, ಬಿ.ಚನ್ನಕೇಶವಗೌಡ ಇತರರಿದ್ದರು.
Published on: 

ಬಾಳೆಹೊನ್ನೂರು: ಭಾರತ ಪುಣ್ಯಭೂಮಿಯಾಗಿದ್ದು ಸಾಧು ಸಂತರು, ಇತಿಹಾಸ ಪುರುಷರು ದೇಶಕ್ಕಾಗಿ ಶ್ರಮಿಸಿದ್ದಾರೆ. ಇಂಥ ದೇಶ, ಧರ್ಮವನ್ನು ಕೆಲವು ದುಷ್ಟ ಶಕ್ತಿಗಳು ನಾಶ ಮಾಡಲು ಹೊರಟಿದ್ದು, ಅಂಥವರಿಗೆ ದೇವರು ತಕ್ಕ ಶಿಕ್ಷೆ ನೀಡಿದ್ದಾನೆ ಎಂದು ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠಾಧ್ಯಕ್ಷ ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.

ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಹದಿನೇಳನೇ ವರ್ಷದ ನವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಧರ್ಮಸಭೆ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಾಧು ಸಂತರ ಆಶೀರ್ವಾದ ದೇಶದ ಮೇಲಿದೆ. ದೇಶ ರಕ್ಷಣೆ ಜವಾಬ್ದಾರಿ ಎಲ್ಲರ ಮೇಲಿದ್ದು, ನಮ್ಮ ದೇಶ, ಧರ್ಮಕ್ಕೆ ಸಮಸ್ಯೆ ಬಂದಾಗ ಒಗ್ಗಟ್ಟಾಗಿ ನಿಲ್ಲಬೇಕಿದೆ ಎಂದರು.

ಕೆಲವರು ದೇಶದ ಸಂಸ್ಕೃತಿ ನಾಶಕ್ಕೆ ಹುನ್ನಾರ ನಡೆಸುತ್ತಿದ್ದಾರೆ. ನಮ್ಮ ಮಕ್ಕಳನ್ನು ಕೆಟ್ಟ ದಾರಿಗೆ ತರಲು ಬಹಳ ಶಕ್ತಿಗಳು ಇವೆ. ಈ ಬಗ್ಗೆ ಜಾಗೃತರಾಗಬೇಕಿದೆ. ಜಾತಿ ಬಗ್ಗೆ ಅಭಿಮಾನವಿರಬೇಕು. ಆದರೆ ಅಹಂಕಾರವಿರಬಾರದು. ಯಾವುದೇ ಸಂಕಲ್ಪ ಈಡೇರಲು ಚಿಂತನೆ, ಯೋಚನೆ, ಸಾಧನೆ ಅಗತ್ಯವಾಗಿ ಇರಬೇಕು. ನಮ್ಮ ಯೋಜನೆಗಳು ಗುರಿ ತಲುಪಲು ಹಲವು ಸಮಸ್ಯೆಗಳು ಎದುರಾಗಲಿವೆ. ನಮಲ್ಲಿ ಧರ್ಮ ನಿಷ್ಠೆ ಇರಬೇಕು ಎಂದು ಹೇಳಿದರು.

ಲೇಖಕ ಡಾ. ರಾಹುಲ್ ದೇವರಾಜ್ ಮಾತನಾಡಿ, ನವರಾತ್ರಿ ಅರ್ಥಪೂರ್ಣ ಆಚರಣೆಯಾಗಿದ್ದು, ಪುರುಷ ಪ್ರಧಾನವಾಗಿ ಸಮಾಜ ಬೆಳೆಯುತ್ತಿದ್ದರೂ ಹೆಣ್ಣಿಗೆ ಮೊದಲ ಸ್ಥಾನವಿದೆ ಎಂಬುದನ್ನು ನವರಾತ್ರಿ ಸಾರಿದೆ. ಆಧುನಿಕ ಯುಗದಲ್ಲಿ ಹೆಣ್ಣು ಮಕ್ಕಳಿಗೆ ಕೊಡಬೇಕಾದ ಆದ್ಯತೆ, ಸ್ಥಾನಮಾನವನ್ನು ನವರಾತ್ರಿ ಆಚರಣೆ ತೋರಿಸುತ್ತಿದೆ. ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳುವುದೇ ನವರಾತ್ರಿ ಎಂದು ವಿಶ್ಲೇಷಿಸಿದರು.

ಮನಸ್ಸಿನಲ್ಲಿ ಕಪಟವಿಟ್ಟುಕೊಂಡು ದೇವರನ್ನು ಒಲಿಸಿಕೊಂಡು ಉದ್ಧಾರವಾಗಲು ಸಾಧ್ಯವಿಲ್ಲ. ಒಳ್ಳೆಯ ವ್ಯಕ್ತಿಯ ಕೈಯನ್ನು ದೇವರು ಎಂದಿಗೂ ಬಿಡುವುದಿಲ್ಲ. ನಮ್ಮ ಸಂಸ್ಕೃತಿ ಮೇಲಿನ ಕೀಳರಿಮೆ ಬಿಡಬೇಕು ಎಂದರು.

ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಲೇಖಕ ರಾಹುಲ್ ದೇವರಾಜ್ ಅವರಿಗೆ ‘ಶ್ರೀದುರ್ಗಾ ಆಧುನಿಕ ನೀತಿ ಕಥೆಗಳ ರೂವಾರಿ’ ಪುರಸ್ಕಾರ ನೀಡಲಾಯಿತು. ನವರಾತ್ರಿ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ದಾನಿಗಳು, ಸೇವಾಕರ್ತರನ್ನು ಸನ್ಮಾನಿಸಲಾಯಿತು.

ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ಬಿ.ಚನ್ನಕೇಶವಗೌಡ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಚೈತನ್ಯ ವೆಂಕಿ, ಶಿವರಾಮ ಶೆಟ್ಟಿ, ಎಚ್.ಎಚ್.ಕೃಷ್ಣಮೂರ್ತಿ, ನಾರಾಯಣ ಶೆಟ್ಟಿ, ಎಚ್.ಡಿ.ಸತೀಶ್, ಬಿ.ಕೆ.ನಾಗರಾಜ್, ಡಿ.ಎನ್.ಸುಧಾಕರ್, ಉಪೇಂದ್ರ, ಬಿ.ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net