

ಎನ್.ಆರ್.ಪುರ: ಸರ್ಕಾರದ ಆದೇಶದಂತೆ ಗ್ರಾಪಂ ಮಟ್ಟದಲ್ಲೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಯಾಗುತ್ತಿದೆ ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ತಿಳಿಸಿದರು.
ತಾಪಂನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಸರ್ಕಾರ ಜನರ ಜೀವನಮಟ್ಟ ಸುಧಾರಿಸಲು ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದು, ಈ ಸವಲತ್ತುಗಳನ್ನು ಕ್ರಮಬದ್ಧ ಹಾಗೂ ಪರಿಣಾಮಕಾರಿಯಾಗಿ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಪಂ ಮಟ್ಟದಲ್ಲಿ 6 ಸದಸ್ಯರ ಸಮಿತಿಗಳನ್ನು ರಚನೆ ಮಾಡುವಂತೆ ಆದೇಶ ನೀಡಿದೆ. ಈಗಾಗಲೇ ಪ್ರತಿ ಗ್ರಾಪಂ ಮಟ್ಟದಲ್ಲೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದರು.
ಪ್ರತಿ ಗ್ರಾಪಂ ಮಟ್ಟದಲ್ಲೂ ಭಾರತ್ ಜೋಡೋ ಸಮಿತಿಗಳನ್ನೂ ರಚಿಸಲಾಗಿದ್ದು, ಈಗಾಗಲೇ ಗ್ರಾಪಂ ಹಂತದಲ್ಲಿ 100 ಜನರಂತೆ ಆನ್‌ಲೈನ್ ಹಾಗೂ ಆ್ಲೈನ್ ಮೂಲಕ ನೋಂದಾಯಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಸದಸ್ಯರಾದ ನಿತ್ಯಾನಂದ, ನಾಗರಾಜ್, ಜಯರಾಂ, ಅಪೂರ್ವಾ, ಹೂವಮ್ಮ, ಟಿ.ಟಿ.ಇಸ್ಮಾಯಿಲ್, ಬೇಸಿಲ್, ತಾಪಂ ಯೋಜನಾ ಅಧಿಕಾರಿ ಬಿ.ವಿ.ಯಾದವರಾಜ್ ಇದ್ದರು.