

ಎನ್.ಆರ್.ಪುರ: ಕ್ರೀಡೆಯಿಂದ ಪ್ರೀತಿ, ವಿಶ್ವಾಸ, ಸಂಬಂಧಗಳು ವೃದ್ಧಿಸುತ್ತವೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್ ಹೇಳಿದರು.
ಡಿಸಿಎಂಸಿ ಶಾಲೆ ಕ್ರೀಡಾಂಗಣದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಾತನಾಡಿದರು.
ಕ್ರೀಡೆ ಕೇವಲ ದೈಹಿಕ ಸದೃಢರನ್ನಾಗಿಸದೆ ಮಾನಸಿಕ ನೆಮ್ಮದಿ ನೀಡುತ್ತದೆ. ಹಿಂದೂ ಮಹಾಗಣಪತಿ ಸಮಿತಿ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಸಮಿತಿ ಉಪಾಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಗಣಪತಿ ಹಬ್ಬ ಸಾರ್ವಜನಿಕವಾಗಿ ಆಚರಿಸಲು ಇತಿಹಾಸವಿದೆ. ಛತ್ರಪತಿ ಶಿವಾಜಿ ಮಹಾರಾಜರು ಸಂಸ್ಕೃತಿ ಮತ್ತು ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಗಣೇಶೋತ್ಸವಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು ಎಂದರು.
ತಾಲೂಕು ಒಕ್ಕಲಿಗರ ಸಂಘದ ಖಜಾಂಚಿ ಕಟಗಳಲೆ ಲೋಕೇಶ್ ಮಾತನಾಡಿ, ಎಲ್ಲ ಭಾರತೀಯರನ್ನು ಒಗ್ಗೂಡಿಸಲು ಮತ್ತು ದೇಶಭಕ್ತಿಯನ್ನು ಮೂಡಿಸಲು ಗಣಪತಿ ಹಬ್ಬವನ್ನು ಒಂದು ಪ್ರಬಲ ವೇದಿಕೆಯಾಗಿ ಬಾಲಗಂಗಾಧರ ತಿಲಕರು ಬಳಸಿಕೊಂಡರು. ಹೀಗೆ ಧಾರ್ಮಿಕ ಶ್ರದ್ಧೆ ಮತ್ತು ರಾಷ್ಟ್ರೀಯ ಭಾವನೆ ಎರಡೂ ಒಟ್ಟಾಗಿ ಗಣಪತಿ ಹಬ್ಬವು ಇಂದಿಗೂ ಭಾರತದಾದ್ಯಂತ ವೈಭವದಿಂದ ಆಚರಿಸಲ್ಪಡುತ್ತಿದೆ. ಕ್ರೀಡೆ ಜಾತಿ, ಧರ್ಮಕ್ಕೆ ಸೀಮಿತವಾಗಿರದೆ ಎಲ್ಲ ಸಮುದಾಯದವರನ್ನೂ ಒಗ್ಗೂಡಿಸುತ್ತದೆ ಎಂದರು.
ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಪ್ರುಲ್ಲ ಕಣಿವೆ, ಕೆ.ಪಿ.ಸುರೇಶ್‌ಕುಮಾರ್, ರಶ್ಮಿ ದಯಾನಂದ್, ದ್ವಾರಮಕ್ಕಿ ಅಶ್ವನ್, ಮದನ್ ಗೌಡ, ಪ್ರೇಮಾ ಶ್ರೀನಿವಾಸ್, ರೇವತಿ ಮತ್ತಿತರರಿದ್ದರು.