ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಮುಖ್ಯ Ishapriya Teertha Swamiji

Aldur: Sports are essential for robust health, and a competitive spirit is key in sports, stated Sri Eshapriya Teertha Swamiji of the Adamaru Matha, Udupi. Inaugurating a sports meet held on Friday at the local Poornaprajna School, he remarked that participating in games boosts self-confidence and advised that both victory and defeat should be accepted with an equal mind.
ಆಲ್ದೂರು ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಈಶಪ್ರಿಯಾ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಬಿ.ಬಿ.ರೇಣುಕಾರ್ಯ , ವೆಂಕಟೇಶ್, ಪ್ರಶಾಂತ್ ಇದ್ದರು.
ಆಲ್ದೂರು ಪೂರ್ಣ ಪ್ರಜ್ಞಾ ಶಾಲೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟವನ್ನು ಈಶಪ್ರಿಯಾ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಬಿ.ಬಿ.ರೇಣುಕಾರ್ಯ , ವೆಂಕಟೇಶ್, ಪ್ರಶಾಂತ್ ಇದ್ದರು.
Published on: 

ಆಲ್ದೂರು: ಸದೃಢ ಆರೋಗ್ಯಕ್ಕೆ ಕ್ರೀಡೆ ಅಗತ್ಯ. ಕ್ರೀಡೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಮುಖ್ಯ ಎಂದು ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯಾ ತೀರ್ಥ ಸ್ವಾಮೀಜಿ ಹೇಳಿದರು. ಇಲ್ಲಿನ ಪೂರ್ಣಪ್ರಜ್ಞಾ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿ, ಆಟದಲ್ಲಿ ಪಾಲ್ಗೊಳ್ಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ಕೆಎಸ್‌ಎಸ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ತುಕಾರಂ ಯನಕಲ್ ಮಾತನಾಡಿ, ಉತ್ತಮ ಆರೋಗ್ಯ, ಜ್ಞಾನ ಹಾಗೂ ಗುರು ಹಿರಿಯರ ಆಶೀರ್ವಾದದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶಾಲೆಯ ಜಂಟಿ ಕಾರ್ಯದರ್ಶಿ ಎಚ್.ಆರ್.ಸುಧಾಕರ್ ಮಾತನಾಡಿ, ಸಾಧನೆ ಸಾಧಕನ ಸ್ವತ್ತು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ಸದೃಢರಾಗಬೇಕು ಎಂದರು. ಭದ್ರಾವತಿ, ಸಂಗಮೇಶ್ವರಪೇಟೆ, ಬೇಲೂರು, ಆಲ್ದೂರು ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಶಾಲೆಯ ಕಾರ್ಯದರ್ಶಿ ಬಿ.ಬಿ.ರೇಣುಕಾರ್ಯ , ಮುಖ್ಯ ಶಿಕ್ಷಕ ವೆಂಕಟೇಶ್,ಬೇಲೂರು ಪೂರ್ಣ ಪ್ರಜ್ಞಾ ಸಂಸ್ಥೆಯ ಮುಖ್ಯಶಿಕ್ಷಕ ಪ್ರಶಾಂತ್, ಶಾಲೆಯ ಶಿಕ್ಷಕರು ಇದ್ದರು.