ಆಟೋ ಚಾಲಕರಿಂದ ಅದ್ದೂರಿ ರಾಜ್ಯೋತ್ಸವ

Grand Rajyotsava celebration by auto drivers
ಬೀರೂರು ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಕನ್ನಡಾಂಬೆಯ ಸ್ತಬ್ಧಚಿತ್ರ ಮೆರವಣಿಗೆ ನಡೆಸಲಾಯಿತು.
ಬೀರೂರು ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಕನ್ನಡಾಂಬೆಯ ಸ್ತಬ್ಧಚಿತ್ರ ಮೆರವಣಿಗೆ ನಡೆಸಲಾಯಿತು.
Published on: 

ಬೀರೂರು: ಪಟ್ಟಣದ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ, ಕನಕಶ್ರೀ, ವಿನಾಯಕ, ರೈಲ್ವೆ ಸ್ಟೇಷನ್ ಆಟೋ ನಿಲ್ದಾಣಗಳನ್ನು ಕನ್ನಡ ಧ್ವಜ, ವಿದ್ಯುತ್ ದೀಪಗಳು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಕುರುಬರ ಸಂಘದ ಆವರಣದಿಂದ ಭುವನೇಶ್ವರಿ ಭಾವಚಿತ್ರವನ್ನು ಮತ್ತು ಆಟೋಗಳ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಾಲುಮರದ ತಿಮ್ಮಕ್ಕ, ಹಿರಿಯ ಚಿತ್ರನಟರ ಭಾವಚಿತ್ರಗಳನ್ನು ಅಳವಡಿಸಿಕೊಂಡು ಜೋಡೆತ್ತುಗಳು, ವೀರಗಾಸೆ, ಕರಡಿ ಕುಣಿತ, ಡ್ರಮ್ಸ್, ಪಟಾಕಿಗಳೊಂದಿಗೆ ಮೆರವಣಿಗೆ ಮೂಲಕ ಗಣಪತಿ ಪೆಂಡಾಲ್ ಆವರಣದ ಮುಂಭಾಗಕ್ಕೆ ಕರೆತರಲಾಯಿತು. ಬಳಿಕ ಕನ್ನಡಾಂಬೆಗೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣ ಮಾಡಿ, ಕನ್ನಡದ ಘೋಷಣೆಗಳನ್ನು ಕೂಗಿದರು.

ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಬಿ.ಎಲ್.ರವಿಕುಮಾರ್ ಮಾತನಾಡಿ, ಕನ್ನಡ ಭಾಷೆ ಬೆಳವಣಿಗೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿ ಕನ್ನಡಿಗನ ಹೊಣೆಗಾರಿಕೆ ಎಂದರು.

ಸಂಘದಿಂದ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಸಂಜೆ ಗಣಪತಿ ಪೆಂಡಾಲ್ ಆವರಣದ ಸಂಗೊಳ್ಳಿ ರಾಯಣ್ಣ ಕಲಾಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಘದ ಉಪಾಧ್ಯಕ್ಷ ಡಿ.ಟಿ.ರಾಜು, ಕಾರ್ಯದರ್ಶಿ ಮಂಜುನಾಥ್, ಸಲಹೆಗಾರ ಮಾಲತೇಶ್, ವಿಲ್ಸನ್ ಜಯರಾಜ್, ತಮ್ಮಯ್ಯ, ಗೋವಿಂದನಾಯ್ಕ, ಮುರಳಿ, ಚೇತನ್, ಭರತ್, ಸುಬ್ಬು, ಷಣ್ಮುಖ, ಆಟೋ ಚಾಲಕರು ಮತ್ತು ಮಾಲೀಕರು ಇತರರಿದ್ದರು.