ರಾಜ್ಯ ಸರ್ಕಾರದಿಂದ ಗ್ಯಾರಂಟಿ ಜತೆಗೆ ಅಭಿವೃದ್ಧಿಗೂ ಅದ್ಯತೆ

ಜಯಪುರದಲ್ಲಿ ಅಂಬೇಡ್ಕರ್‌ವೃತ್ತ ವಿಸ್ತರಣೆ ಕಾರ್ಯಕ್ಕೆ ಶಾಸಕ ಟಿ.ಡಿ.ರಾಜೇಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಪ್ರವೀಣ್ ಜಾಲ್ಮರ, ಸತೀಶ್,ಕೀರ್ತಿರಾಜ್, ಪಣಿರಾಜ್, ವಜ್ರಪ್ಪ, ಅಶ್ವಥ್ ಇದ್ದರು.
ಜಯಪುರದಲ್ಲಿ ಅಂಬೇಡ್ಕರ್‌ವೃತ್ತ ವಿಸ್ತರಣೆ ಕಾರ್ಯಕ್ಕೆ ಶಾಸಕ ಟಿ.ಡಿ.ರಾಜೇಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಪ್ರವೀಣ್ ಜಾಲ್ಮರ, ಸತೀಶ್,ಕೀರ್ತಿರಾಜ್, ಪಣಿರಾಜ್, ವಜ್ರಪ್ಪ, ಅಶ್ವಥ್ ಇದ್ದರು.
Published on: 

ಜಯಪುರ: ರಾಜ್ಯಸರ್ಕಾರ ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಮೌಲ್ಯದ ಸೌಲತ್ತುಗಳನ್ನು ನೀಡುವ ಜತೆಗೆ ಮೂಲ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಶಾಸಕ ಟಿ. ಡಿ.ರಾಜೇಗೌಡ ಹೇಳಿದರು.

ಜಯಪುರದಲ್ಲಿ ಶೃಂಗೇರಿ ರಸ್ತೆಯ ಅಂಬೇಡ್ಕರ್ ವೃತ್ತದ ವಿಸ್ತರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ರಾಜ್ಯಸರ್ಕಾರ ವಸ್ತಾರೆಯಿಂದ ಶೃಂಗೇರಿ ಸಂಪರ್ಕ ರಸ್ತೆಗೆ 90 ಕೋಟಿ, ಅನುದಾನ ಮೀಸಲಿರಿಸಿದ್ದು, ಹೆಚ್ಚುವರಿ 75 ಕೋಟಿ ರೂ.ಅನುದಾನಕ್ಕೆ ಮನವಿ ಮಾಡಲಾಗಿದೆ. ಇದರಿಂದ ಸದ್ಯದಲ್ಲಿ 7ಮೀಟರ್ ಅಗಲದ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ.

ಹರಿಹರಪುರ ಪೇಟೆ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ., ಶೃಂಗೇರಿ ಬಾಲಕಿಯರ ವಸತಿಗ್ರೃಹ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಜಯಪುರದ ಸರ್ಕಲ್ ಅಭಿವೃದ್ಧಿಗೆ 2 ಕೋಟಿ ರೂ. ಹಣ ನೀಡಲಾಗಿದೆ. ಇದರಲ್ಲಿ ಈಗಿರುವ ರಸ್ತೆಯಂಚಿನಿಂದ 28 ಅಡಿ ಹೆಚ್ಚುವರಿ ರಸ್ತೆ ನಿರ್ಮಾಣ ಮಾಡಲಿದ್ದು, ಕಟ್ಟಡಗಳ ಮಾಲೀಕರು ಸಹಕರಿಸಬೇಕು. ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ರಾಜ್ಯಹೆದ್ದಾರಿ ಗೆ 70ಮೀಟರ್ ಹಾಗೂ ರಾಜ್ಯ ಹೆದ್ದಾರಿಗೆ 40 ಮೀಟರ್ ಜಾಗ ಕಡ್ಡಾಯವಾಗಿ ಬಿಡಬೇಕಿದೆ ಎಂದರು.

ಹೇರೂರಿನಲ್ಲಿ ನಡೆದ ಕೊಪ್ಪ ತಾಲೂಕು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಶೃಂಗೇರಿ ತಾಪಂ ಕಾರ್ಯನಿರ್ವಾಹಣಾಧಿಕಾರಿಯ ನಡುವಿನ ಗಲಾಟೆ ಪ್ರಕರಣ ವೈಯಕ್ತಿಕ ಕಾರಣಕ್ಕೆ ನಡೆದಿದ್ದು, ಅವರಿಬ್ಬರನ್ನು ಕರೆದು ಮಾತನಾಡಲಾಗಿದೆ. ಪ್ರಕರಣ ರಾಜಿ ಮಾಡಿಕೊಳ್ಳುವುದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದರು.

ಸಾಮಾಜಿಕ ಕಾರ್ಯಕರ್ತ ಅನಿಲ್ ಡಿಮೆಲ್ಲೋ ಮಾತನಾಡಿ, ಶೃಂಗೇರಿ ಸಂಪರ್ಕ ಜಯಪುರದ ಅಂಬೇಡ್ಕರ್ ವೃತ್ತ ಅಗಲೀಕರಣ ರಸ್ತೆ ಅಂಚಿನಿಂದ ಕನಿಷ್ಠ 28 ಅಡಿ ಹೆಚ್ಚುವರಿ ರಸ್ತೆ ನಿರ್ಮಾಣವಾಗಬೇಕು ಇಲ್ಲವಾದರೆ ವಾಹನ ಸಂಚಾರಕ್ಕೆ ತೊಂದರೆಯಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net