ಸಿದ್ಧಾರ್ಥ ಹೆಗ್ಗಡೆ ಸೇವೆಯಿಂದ ಕಾಫಿ ಕ್ಷೇತ್ರದ ಚೇತರಿಕೆ ( V.G. Siddhartha Hegde,)

ಮೂಡಿಗೆರೆ ಹೊರವಲಯದ ಸಿದ್ದಾರ್ಥ ವನದಲ್ಲಿ ದಿ. ಸಿದ್ದಾರ್ಥ ಹೆಗ್ಗಡೆ ಅವರ ಜನ್ಮದಿನಾಚರಣೆ ನಡೆಯಿತು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿ.ಎಚ್.ಹಾಲಪ್ಪಗೌಡ, ಬ್ರಿಜೇಶ್ ಕಡಿದಾಳ್, ಅಲ್ತಾಫ್ ಬಿಳಗುಳ, ಬಿ.ಆರ್.ಬಾಲಕೃಷ್ಣ, ಜೆ.ಎಸ್.ರಘು, ಡಾ.ಜೆ.ಪಿ.ಕೃಷ್ಣೇಗೌಡ, ಡಿ.ಕೆ.ಲಕ್ಷ್ಮಣ್ ಗೌಡ ಇತರರಿದ್ದರು.
ಮೂಡಿಗೆರೆ ಹೊರವಲಯದ ಸಿದ್ದಾರ್ಥ ವನದಲ್ಲಿ ದಿ. ಸಿದ್ದಾರ್ಥ ಹೆಗ್ಗಡೆ ಅವರ ಜನ್ಮದಿನಾಚರಣೆ ನಡೆಯಿತು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿ.ಎಚ್.ಹಾಲಪ್ಪಗೌಡ, ಬ್ರಿಜೇಶ್ ಕಡಿದಾಳ್, ಅಲ್ತಾಫ್ ಬಿಳಗುಳ, ಬಿ.ಆರ್.ಬಾಲಕೃಷ್ಣ, ಜೆ.ಎಸ್.ರಘು, ಡಾ.ಜೆ.ಪಿ.ಕೃಷ್ಣೇಗೌಡ, ಡಿ.ಕೆ.ಲಕ್ಷ್ಮಣ್ ಗೌಡ ಇತರರಿದ್ದರು.
Published on
ಮೂಡಿಗೆರೆ: ಕಾಫಿ ಕ್ಷೇತ್ರದ ದಿಗ್ಗಜ ವಿ.ಜಿ.ಸಿದ್ದಾರ್ಥ ಹೆಗ್ಗಡೆ ಅವರು ತಮ್ಮ ಜೀವನವನ್ನು ಕಾಫಿ ಬೆಳೆಗಾರರ ಮತ್ತು ಕಾರ್ಮಿಕರ ಹಿತಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ಸೇವೆಯಿಂದಾಗಿ ಕಾಫಿ ಕ್ಷೇತ್ರ ತಕ್ಕಮಟ್ಟಿಗೆ ಚೇತರಿಸಿಕೊಂಡಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
 ಪಟ್ಟಣದ ಹೊರವಲಯದ ಸಿದ್ಧಾರ್ಥ ವನದಲ್ಲಿ ಸಿದ್ಧಾರ್ಥ ಹೆಗ್ಗಡೆ ಅವರ ಅಭಿಮಾನಿಗಳ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ವೇದಿಕೆ ಹಾಗೂ ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್‌ನಿಂದ ಭಾನುವಾರ ಏರ್ಪಡಿಸಿದ್ದ ಸಿದ್ದಾರ್ಥ ಹೆಗ್ಗಡೆ ಅವರ ಜನ್ಮ ದಿನಾಚರಣೆ ಹಾಗೂ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
 ಸರಳ ಸಜ್ಜನಿಕೆಯ ಸಿದ್ಧಾರ್ಥ ಹೆಗ್ಗಡೆ ಅವರು ತಮ್ಮ ಜೀವಿತಾವಧಿಯಲ್ಲಿ ಕಾಫಿ ಬೆಳೆಗಾರರ ಪರ ನಿರಂತರ ಹೋರಾಟ ನಡೆಸಿದ್ದರು. ಅವರ ಹೆಸರು ಶಾಶ್ವತವಾಗಿ ಉಳಿಯಲು ಜಿಲ್ಲೆಯ ಎಲ್ಲ ಕಡೆ ಸಿದ್ದಾರ್ಥ ಹೆಗ್ಗಡೆ ಅವರ ನೆನಪಿಗಾಗಿ ಹಲವು ಕಾರ್ಯಕ್ರಮ ರೂಪಿಸುವ ಅಗತ್ಯವಿದೆ ಎಂದರು.
    ಸಿದ್ಧಾರ್ಥ ಹೆಗ್ಗಡೆ ಅಭಿಮಾನಿಗಳ ಬಳಗದ ಅಧ್ಯಕ್ಷ ಜಿ.ಎಚ್.ಹಾಲಪ್ಪಗೌಡ ಮಾತನಾಡಿ, ಸಿದ್ದಾರ್ಥ ಅವರ ಹೆಸರು ಬಳಸಿಕೊಂಡು ಯಾವುದೆ ವ್ಯಕ್ತಿ ಹಾಗೂ ಸಂಘಟನೆ ಹಣ ಸಂಗ್ರಹಿಸಿ ಕಾರ್ಯಕ್ರಮ ಆಯೋಜಿಸಬಾರದು. ಅಂತಹ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಿದ್ದರೆ ಸಿದ್ದಾರ್ಥ ಹೆಗ್ಗಡೆ ಅವರ ಕುಟುಂಬದವರ ಗಮನಕ್ಕೆ ತರಬೇಕು. ವೈಯಕ್ತಿಕ ಲಾಭಕ್ಕಾಗಿ ಕುಟುಂಬದ ಗೌರವ, ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ, ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಒಕ್ಕಲಿಗರ ಸಂಘದ ಅಧ್ಯಕ್ಷ ಅಶೋಕ್, ಡಾ.ಜೆ.ಪಿ.ಕೃಷ್ಣೆಗೌಡ, ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ, ಪಿ.ಜಿ.ಅನುಕುಮಾರ್, ಜೆ.ಎಸ್.ರಘು, ಶಿವಪ್ರಕಾಶ್, ಮಂಚೇಗೌಡ, ಎಂ.ಸಿ.ಹೂವಪ್ಪ, ವಿನಯ್, ಶಿವಣ್ಣ, ಪ್ರಶಾಂತ್, ಸುಗುಣ, ಮೋಯ್ದಿನ್ ಸೇಟ್, ಪ್ರಶಾಂತ್, ಪೂರ್ಣೇಶ್ ಮೂರ್ತಿ, ಮದೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net