ವಿದ್ಯುತ್ ಸಮಸ್ಯೆ ಶೀಘ್ರ ಬಗೆಹರಿಸಿ

ಬೀರೂರಿನ ಮೆಸ್ಕಾಂ ಉಪವಿಭಾಗದಲ್ಲಿ ಜನ ಸಂಪರ್ಕ ಸಭೆ ನಡೆಯಿತು. ಮಂಜುನಾಥ್, ರವಿಕಿರಣ್, ವೀಣಾ ಇದ್ದರು.
ಬೀರೂರಿನ ಮೆಸ್ಕಾಂ ಉಪವಿಭಾಗದಲ್ಲಿ ಜನ ಸಂಪರ್ಕ ಸಭೆ ನಡೆಯಿತು. ಮಂಜುನಾಥ್, ರವಿಕಿರಣ್, ವೀಣಾ ಇದ್ದರು.
Published on
 ಬೀರೂರು: ಹೊಗರೇಹಳ್ಳಿ ಭಾಗದಲ್ಲಿ ವಿದ್ಯುತ್ ತೀವ್ರ ಸಮಸ್ಯೆ ಉಂಟಾಗಿದ್ದು ಸರ್ಕಾರ ರೈತರಿಗಾಗಿ ನಿಗದಿ ಮಾಡಿರುವ 7 ಗಂಟೆ ಅವಧಿಯಲ್ಲಿ ನಾಲ್ಕಾರು ಬಾರಿ ವಿದ್ಯುತ್ ವ್ಯತ್ಯಯವಾಗುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ರೈತರಿಗೆ ಸ್ಪಂದಿಸದ ಅಧಿಕಾರಿಯನ್ನು  ವರ್ಗಾವಣೆ ಮಾಡಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮೆಸ್ಕಾಂ ಕಚೇರಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ರೈತರು ತೋಟ ಹಾಗೂ ಜಮೀನುಗಳ ಕೊಳವೆಬಾವಿಗಳನ್ನು ಸ್ಥಗಿತಗೊಳಿಸುತ್ತಿದ್ದಾರೆ. ಆದರೂ ವಿದ್ಯುತ್‌ನಲ್ಲಿ ವ್ಯತ್ಯಯವಾಗುತ್ತಿರುವುದಕ್ಕೆ ಕಾರಣವೇನು?  ಕಡೂರು ಉಪವಿಭಾಗದ ಎಇ ಸ್ಥಳಕ್ಕೆ ಬಂದು ಪರಿಶೀಲಿಸಿ ಮೂರು ದಿನದಲ್ಲಿ ಸರಿಪಡಿಸಿ ಎಂದು ಆದೇಶ ಹೊರಡಿಸಿದ್ದರು. ಆದರೆ ಮೂರು ತಿಂಗಳು ಕಳೆದರೂ ಸಮಸ್ಯೆ ಬಹೆಹರಿದಿಲ್ಲ. ಜನಸಂಪರ್ಕ ಸಭೆ ಕುರಿತು ಯಾವುದೇ ಮಾಹಿತಿ ನೀಡುವುದಿಲ್ಲ. ಪತ್ರಿಕೆಗಳಲ್ಲಿ ಪ್ರಕಟಣೆ ಹಾಕುತ್ತಿರಾ. ಆದರೆ ನಮ್ಮ ಗ್ರಾಮಗಳಿಗೆ ಪತ್ರಿಕೆಯೆ ಬರೋದಿಲ್ಲ. ಹೊಗರೇಹಳ್ಳಿ ರೈತರ ಸಮಸ್ಯೆಗಳಿಗೆ ಸಹಾಯಕ ಇಂಜಿನಿಯರ್ ಸ್ಪಂದಿಸುತ್ತಿಲ್ಲ. ಅವರನ್ನು ವರ್ಗಾವಣೆಗೊಳಿಸಬೇಕು ಎಂದು ರೈತ ಮನು ಒತ್ತಾಯಿಸಿದರು. ಇದಕ್ಕೆ ಪ್ರದೀಪ್ ಧ್ವನಿಗೂಡಿಸಿದರು. 
ಕಡೂರು ಇಇ ರವಿಕಿರಣ್, ಬೀರೂರು ಎಇಇ ವೀಣಾ, ಜೆಇ ಯತೀಶ್ ಮತ್ತು ಮೆಸ್ಕಾಂ ಸಿಬ್ಬಂದಿ, ಗ್ರಾಹಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net