ಮಲ್ಲಿಕಾರ್ಜುನ ಖರ್ಗೆಗೆ ಅಪಮಾನ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಮನುವಾದಿಗಳು ಶುದ್ಧೀಕರಿಸುವ ಮೂಲೊಕ ದಲಿತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಪೂರ್ಣೇಶ್ ಇಂದಾವರ, ಚೌಡಪ್ಪ, ಮಂಜಯ್ಯ ಬಾಚಿಗನಹಳ್ಳಿ ಮತ್ತಿತರರಿದ್ದರು.
ಚಿಕ್ಕಮಗಳೂರು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಮನುವಾದಿಗಳು ಶುದ್ಧೀಕರಿಸುವ ಮೂಲೊಕ ದಲಿತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಪೂರ್ಣೇಶ್ ಇಂದಾವರ, ಚೌಡಪ್ಪ, ಮಂಜಯ್ಯ ಬಾಚಿಗನಹಳ್ಳಿ ಮತ್ತಿತರರಿದ್ದರು.
Published on
ಚಿಕ್ಕಮಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಮನುವಾದಿಗಳು ಶುದ್ಧೀಕರಿಸುವ ಮೂಲೊಕ ದಲಿತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಬುಧವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಒಕ್ಕೂಟದ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ, ಕಳೆದ ಐದಾರು ದಶಕಗಳಿಂದ ದೇಶ ವನ್ನಾಳಿದ ದಲಿತ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರ ಭಾಷಣದ ಸ್ಥಳವನ್ನು ಬಿಜೆಪಿ ಹಾಗೂ ಮನು ವಾದಿಗಳು ಸ್ವಚ್ಚತೆಗೊಳಿಸುವ ಮೂಲಕ ಅಪಮಾನಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
ರಾಷ್ಟçದ ಬಿಜೆಪಿ ಮುಖಂಡರು ನಾವೆಲ್ಲಾ ಒಂದು, ನಾವೆಲ್ಲೂ ಹಿಂದೂ ಎಂಬ ಸಿದ್ದಾಂತ ಅಳವಡಿಸಿಕೊಂಡಿದ್ದೇವೆ ಎನ್ನುತ್ತಾರೆ. ಆದರೆ ದೇಶವನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಶೂದ್ರರೆಂಬ ಕಾರಣಕ್ಕೆ ಅವರ ಭಾಷಣದ ಸ್ಥಳವನ್ನು ಶುದ್ಧೀಕರಿಸಿ, ಹೋಮ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ರಾಷ್ಟçವನ್ನು ಆಳುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ನಾವೆಲ್ಲರೂ ಒಂದು, ಸಂವಿಧಾನಾತ್ಮಕ ಹೋರಾಟ ನಡೆಸೋಣ, ಸಮಾನತೆ ಸಾರೋಣ ಎಂದೇಳುವ ಮುಖಾಂತರ ಮಧ್ಯದಲ್ಲಿ ಈ ರೀತಿಯ ಜಾತಿವಾದದ ವಿಷಬೀಜ ಭಿತ್ತುತ್ತಿರುವುದು ಖಂಡನೀಯ. ಈ ಕಿಡಿಕೇಡಿಗಳನ್ನು ಸಂವಿಧಾನ ಚೌಕಟ್ಟಿನಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆಗೆ ಮುಂದಾಗದಿದ್ದಲ್ಲಿ ನೆರೆ ರಾಷ್ಟçದಲ್ಲಿ ನಡೆದ ಧಂಗೆ ಮಾದರಿಯಲ್ಲೇ, ಭಾರತದಲ್ಲೂ ಧಂಗೆ ಎದ್ದು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಸುವ ಕೆಲಸ ಮಾಡಲಿದ್ದೇವೆ. ದೇಶದ ಮೂಲನಿವಾಸಿಗಳು ದಲಿತರು. ಆರ್ಯರು ವ್ಯಾಪಾರಕ್ಕೆ ಬಂದವರು. ಹಾಗಾಗಿ ಶೋಷಿತರನ್ನು ಅವಮಾನಿಸುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ಒಕ್ಕೂಟದ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ಮಲ್ಲಿಕಾರ್ಜುನ್ ಖರ್ಗೆ ಓರ್ವ ದಲಿತ ನಾಯಕನೆಂಬ ಕಾರಣಕ್ಕೆ ಕೆಲವು ಮನುವಾದಿಗಳು ವೇದಿಕೆ ಸ್ಥಳವನ್ನು ಸ್ವಚ್ಚಗೊಳಿಸಿ ದಲಿತ ಸಮೂಹಕ್ಕೆ ತೀವ್ರ ಅಪಮಾನ ಮಾಡಿದ್ದಾರೆ. ಈ ಕೃತ್ಯವೆಸಗಿರುವ ಆರೋಪಿಗಳನ್ನು ಸರ್ಕಾರ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸದಿದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಪೂರ್ಣೇಶ್ ಇಂದಾವರ, ಚೌಡಪ್ಪ, ರಾಕೇಶ್ ಮುಗುಳುವಳ್ಳಿ, ಹೇಮಂತ್ ಗೌಡನಹಳ್ಳಿ, ಮಂಜಯ್ಯ ಬಾಚಿಗನಹಳ್ಳಿ, ಚಂದ್ರಶೇಖರ್ ಪುರ, ಅಶೋಕ್ ಕೂದುವಳ್ಳಿ, ಶೇಷಮ್ಮ, ಬಸವರಾಜ್, ರಘು, ಕೃಷ್ಣಮೂರ್ತಿ, ವಿರೂಪಾಕ್ಷ ಮಾಗಡಿ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net